ಪಣಜಿ: ದೇಶವನ್ನು ಅಸ್ಥಿರಗೊಳಿಸಲು ಸಾವಿರಾರು ಕೋಟಿ ರೂಪಾಯಿ ಮೊತ್ತದ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಬಾಂಬ್ ಶೆಲ್ ಮೂಲಕ ಕಪ್ಪುಹಣ, ಅಕ್ರಮ ಆಸ್ತಿ, ಭಯೋತ್ಪಾದಕರ ಆರ್ಥಿಕತೆ, ಡ್ರಗ್ಸ್ ಜಾಲಕ್ಕೆ ಮೂಲವಾಗಿದ್ದ ಆರ್ಥಿಕತೆ ಎಂಬ 4 ಅಸುರರ ಮೇಲೆ ಪ್ರಧಾನಿ ನರೇಂದ್ರ ಮೋದಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಭಾರತವನ್ನು ಅಸ್ಥಿರಗೊಳಿಸಲು ಶತೃರಾಷ್ಟ್ರದಿಂದ ಸಾವಿರಾರು ಕೋಟಿ ರೂ ಮೊತ್ತದ ನಕಲಿ ನೋಟುಗಳನ್ನು ಚಲಾವಣೆ ಮಾಡಲಾಗುತ್ತಿತ್ತು. ಈ ಮೂಲಕ ನಮ್ಮ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಬಾಂಗ್ಲಾದೇಶ, ನೇಪಾಳ, ಕಾಶ್ಮೀರದ ಗಡಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಶತೃ ರಾಷ್ಟ್ರ ಭಾರತವನ್ನು ನಾಶ ಮಾಡಲು ನಿಯೋಜಿಸಿದ್ದವರು ಕೇವಲ ಕಾಶ್ಮೀರದಲ್ಲಿ ಮಾತ್ರ ಸಣ್ಣ ದಾಳಿಗಳನ್ನು ನಡೆಸಿ ಜನರನ್ನು ಹತ್ಯೆ ಮಾಡುತ್ತಿರಲಿಲ್ಲ, ಅವರು ನಮ್ಮ ಆರ್ಥಿಕತೆ ಮೇಲೆಯೂ ದಾಳಿ ನಡೆಸುತ್ತಿದ್ದರು, ಕಪ್ಪುಹಣ, ಅಕ್ರಮ ಹಣ, ಭಯೋತ್ಪಾದಕರ ಆರ್ಥಿಕತೆ, ಡ್ರಗ್ ಆರ್ಥಿಕತೆ ಎಂಬ ನಾಲ್ಕು ದುಷ್ಟ ಶಕ್ತಿಗಳು ದೇಶಕ್ಕೆ ಮಾರಕವಾಗಿತ್ತು, ಆದರೆ ಪ್ರಧಾನಿ ಮೋದಿ ನೋಟು ನಿಷೇಧವೆಂಬ ಒಂದೇ ಬಾಂಬ್ ಶೆಲ್ ನಿಂದ ಏಕಕಾಲಕ್ಕೆ ನಾಲ್ಕೂ ದುಷ್ಟ ಶಕ್ತಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮನೋಹರ್ ಪರಿಕ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics