ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಭೀಕರ ರೈಲು ದುರಂತ
ಲಕ್ನೊ: ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ಇಂದು ನಸುಕಿನ ಜಾವ ಕಾನ್ಪುರ ಗ್ರಾಮಾಂತರ ಪ್ರದೇಶದಲ್ಲಿ ಹಳಿತಪ್ಪಿ ಅದರ 14 ಬೋಗಿಗಳು ಮುರಿದು ಬಿದ್ದ ಪರಿಣಾಮ ಉಂಟಾದ ಭೀಕರ ಅಪಘಾತದಲ್ಲಿ ಸಾವಿಗೀಡಾದ ಪ್ರಯಾಣಿಕರ ಸಂಖ್ಯೆ ಏರುತ್ತಲೇ ಇದೆ. ಇತ್ತೀಚಿನ ವರದಿ ಬಂದಾಗ 125 ಮಂದಿ ಮೃತಪಟ್ಟು 250ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಅವರಲ್ಲಿ 100ಕ್ಕೂ ಹೆಚ್ಚು ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪಾಟ್ನಾ ಕಡೆ ಹೊರಟ ರೈಲು ಇಂದು ನಸುಕಿನ ಜಾವ ಮೂರು ಗಂಟೆ ಹೊತ್ತಿಗೆ ಹಳಿ ತಪ್ಪಿ ಬಿದ್ದಿತು. ಇದರಲ್ಲಿ 4 ಸಾಮಾನ್ಯ ಬೋಗಿಗಳಿಗೆ ಹಾನಿಯುಂಟಾಗಿದ್ದು ನಸುಕಿನ ಜಾವ ಸವಿನಿದ್ದೆಯಲ್ಲಿ ಆ ಬೋಗಿಗಳಲ್ಲಿದ್ದ ನೂರಾರು ಪ್ರಯಾಣಿಕರು ಅಪಘಾತದಲ್ಲಿ ಸಿಲುಕಿ ಹಾಕಿಕೊಂಡರು.
ರೈಲ್ವೆ ಬೋಗಿಗಳಲ್ಲಿ ಸಿಲುಕಿ ಹಾಕಿಕೊಂಡ ಪ್ರಯಾಣಿಕರನ್ನು ಹೊರತೆಗೆಯಲು ಸೇನೆ, ಎನ್ ಡಿಆರ್ ಎಫ್ ಮತ್ತು ರಾಜ್ಯ ಪೊಲೀಸರು ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸಾವಿಗೀಡಾದವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಇದುವರೆಗೆ ಸಾವಿಗೀಡಾದವರಲ್ಲಿ 43 ಮಂದಿಯಲ್ಲಿ 20 ಮಂದಿ ಉತ್ತರ ಪ್ರದೇಶ, 15 ಮಂದಿಯನ್ನು ಮಧ್ಯ ಪ್ರದೇಶ, 6 ಮಂದಿ ಬಿಹಾರ ಮತ್ತು ತಲಾ ಒಬ್ಬೊಬ್ಬರು ಮಹಾರಾಷ್ಟ್ರ ಹಾಗೂ ಬಿಹಾರದವರೆಂದು ಗುರುತಿಸಲಾಗಿದೆ.
ಮೃತಪಟ್ಟವರ ಸಂಖ್ಯೆಯನ್ನು ದೃಢೀಕರಿಸಿದ ಉತ್ತರ ಪ್ರದೇಶ ಹೆಚ್ಚುವರಿ ಮಹಾ ನಿರ್ದೇಶಕ ದಲ್ಜೀತ್ ಚೌಧರಿ, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಇಡೀ ರಾಜ್ಯ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ ಎಂದಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಡಿಜಿಪಿ ಜವೀದ್ ಹಮೀದ್ ಅವರಿಗೆ ಸೂಚನೆ ನೀಡಿ ಪರಿಸ್ಥಿತಿಯನ್ನು ಖುದ್ದಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ರೈಲ್ವೆ ಇಲಾಖೆ ಕೆಳಗಿನ ಸಹಾಯವಾಣಿಯನ್ನು ತೆರೆದಿದೆ:
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics