ದೇಶ

ತೇಜಸ್ ಯುದ್ಧ ವಿಮಾನ ರಾಫೆಲ್ ಜೆಟ್ ನಷ್ಟೇ ಸಮರ್ಥ: ಮನೋಹರ್ ಪರಿಕ್ಕರ್

Srinivas Rao BV
ಪಣಜಿ: ವರ್ಷದ ಆರಂಭದಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಫ್ರಂಚ್ ನ ರಾಫೆಲ್ ಫೈಟರ್ ಜೆಟ್ ನಷ್ಟೇ ಸಮರ್ಥವಾದದ್ದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. 
ಫ್ರೆಂಚ್ ನಿರ್ಮಿತ ರಾಫೆಲ್ ಜೆಟ್ ನಷ್ಟೇ ಸಾಮರ್ಥ್ಯ ಹೊಂದಿರುವ ತೇಜಸ್ ಯುದ್ಧ ವಿಮಾನವನ್ನು ದೇಶದ ಶ್ರೇಷ್ಠ ಲಘು ಯುದ್ಧವಿಮಾನಗಳಿಗೆ ಹೋಲಿಕೆ ಮಾಡಬಹುದಾಗಿದ್ದು, ವಿಶ್ವದ ಯಾವುದೇ ಯುದ್ಧವಿಮಾನಕ್ಕೆ ಪೈಪೋಟಿ ನೀಡಬಲ್ಲ ಏಕೈಕ ದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಆಗಿದೆ ಎಂದು ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. 
ರಾಫೆಲ್ ಜೆಟ್ 9 ಟನ್ ಗಳಷ್ಟು ತೂಕವಿರುವ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದರೆ ತೇಜಸ್ ಯುದ್ಧ ವಿಮಾನ 3.5 ಟನ್ ಮಿಸೈಲ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅವಳಿ ಇಂಜಿನ್ ಗಳನ್ನು ಹೊಂದಿರುವ ರಾಫೆಲ್ ಜೆಟ್ 900 ಕಿಮಿ ವೇಗದಲ್ಲಿ ಹಾರುವ ಸಮರ್ಥ್ಯ ಹೊಂದಿದ್ದು, 450 ಕಿಮಿ ದೂರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ. 33 ವರ್ಷಗಳಿಂದ ಸ್ಥಗಿತಗೊಂಡಿದ್ದ ತೇಜಸ್ ಯುದ್ಧ ವಿಮಾನವನ್ನು ಒಂದು ವರ್ಷದಲ್ಲಿ ಸೇನೆಗೆ ಸೇರುವಂತೆ ಸಿದ್ಧಪಡಿಸಬೇಕೆಂದು ತಾವು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. 
SCROLL FOR NEXT