ಕಾಶ್ಮೀರ: ಮೂವರು ಭಾರತೀಯ ಸೈನಿಕರ ಹತ್ಯೆ; ಒಬ್ಬ ಯೋಧನ ಶಿರಚ್ಛೇದ
ಜಮ್ಮು: ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮೂವರು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದು, ಈ ಪೈಕಿ ಓರ್ವ ಯೋಧನ ಶಿರಚ್ಛೇಧನ ಮಾಡಿದ್ದು ಒಂದು ತಿಂಗಳ ಅವಧಿಯಲ್ಲಿ ನಡೆದಿರುವ ಯೋಧರ ಹತ್ಯೆಯ ಎರಡನೇ ಘಟನೆ ಇದಾಗಿದೆ.
ಗಡಿ ಪ್ರದೇಶದ ಮಚ್ಚಾಲ್ ಸೆಕ್ಟರ್ ನಲ್ಲಿ ಪಾಕ್ ಸೇನೆ ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ, ಪಾಕಿಸ್ತಾನ ಭಾರತೀಯ ಯೋಧರನ್ನು ಬಚ್ಚಿಟ್ಟು ಅವರನ್ನು ಹತ್ಯೆ ಮಾಡಿದೆ. ಈ ಹೇಡಿ ಕೃತ್ಯಕ್ಕೆ ನಾವು ಕಠಿಣ ಪ್ರತೀಕಾರ ತೀರಿಸಿಕೊಳ್ಳುತ್ತೇವೆ, ಪಾಕಿಸ್ತಾನದ ಸೇನೆ ಬಗ್ಗೆ ಯಾವುದೇ ಕರುಣೆ ಇಟ್ಟುಕೊಳ್ಳುವುದಿಲ್ಲ ಪಾಕಿಸ್ತಾನ ತಕ್ಕೆ ಬೆಲೆ ತೆರಲೇಬೇಕು ಎಂದು ಭಾರತ ಹೇಳಿದೆ.
ಗಡಿಯೊಳಗೆ ನುಗ್ಗಿ ಭಾರತೀಯ ಯೋಧರನ್ನು ಹತ್ಯೆ ಮಾಡಿರುವ ಪಾಕಿಸ್ತಾನದ ಸೇನೆಯ ತಂಡ ಘಟನೆ ನಡೆದ ಬಳಿಕ ಪರಾರಿಯಾಗಿದೆ. ಕಳೆದ ತಿಂಗಳು ಇದೇ ರೀತಿಯಲ್ಲಿ ಓರ್ವ ಯೋಧನನ್ನು ಹತ್ಯೆ ಮಾಡಿ ಅಂಗಾಗಳನ್ನು ಕತ್ತರಿಸಲಾಗಿತ್ತು. 27 ವರ್ಷದ ಯೋಧ ಸಿಪಾಯಿ ಮನ್ ದೀಪ್ ಸಿಂಗ್ ರನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗುವುದಕ್ಕೂ ಮುನ್ನ ಪಾಕ್ ಸೇನೆ ಹತ್ಯೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics