ಶಿವಸೇನೆ 
ದೇಶ

ಪ್ರಧಾನಿ ಮೋದಿ- ಶಿವಸೇನೆ ಸಂಸದರ ಭೇಟಿ: ನೋಟು ನಿಷೇಧದ ನಿರ್ಧಾರಕ್ಕೆ ಬೆಂಬಲ

ನೋಟು ನಿಷೇಧ ವಿಚಾರದಲ್ಲಿ ಇಷ್ಟು ದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುತ್ತಿದ್ದ ಎನ್ ಡಿಎ ಮೈತ್ರಿಪಕ್ಷ ಶಿವಸೇನೆ ಈಗ ತನ್ನ ನಿರ್ಧಾರವನ್ನು ದಿಢೀರ್ ಬದಲಾವಣೆ ಮಾಡಿದೆ.

ನವದೆಹಲಿ: ನೋಟು ನಿಷೇಧ ವಿಚಾರದಲ್ಲಿ ಇಷ್ಟು ದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುತ್ತಿದ್ದ ಎನ್ ಡಿಎ ಮೈತ್ರಿಪಕ್ಷ ಶಿವಸೇನೆ ಈಗ ತನ್ನ ನಿರ್ಧಾರವನ್ನು ದಿಢೀರ್ ಬದಲಾವಣೆ ಮಾಡಿದೆ. ಶಿವಸೇನೆಯ ಸಂಸದರ ನಿಯೋಗ ನ.22 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೋಟು ನಿಷೇಧಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಶಿವಸೇನೆ ಸಂಸದರು, ತಾವು ಬಿಜೆಪಿ ಹಾಗೂ ಎನ್ ಡಿಎ ಪರವಾಗಿರುವುದಾಗಿ ಭರವಸೆ ನೀಡಿದ್ದಾರೆ.  ಈ ಹಿಂದೆ ನೋಟು ನಿಷೇಧವನ್ನು ವಿರೋಧಿಸಿ ವಿಪಕ್ಷಳು ನಡೆಸಿದ ರಾಷ್ಟ್ರಪತಿ ಭವನದೆಡೆಗಿನ ನಡಿಗೆಯಲ್ಲಿ ಶಿವಸೇನೆ ಭಾಗವಹಿಸಿದ್ದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಶಿವಸೇನೆ ಮುಖ್ಯಸ್ಥರೊಬ್ಬರು ಹೇಳಿದ್ದಾರೆ. 
ರಾಜ್ಯಸಭೆಯ ಶಿವಸೇನೆ ನಾಯಕ ಸಂಜಯ್ ರಾವುತ್, ನೋಟು ನಿಷೇಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲವು ಸಲಹೆಗಳನ್ನು ನೀಡಿದ್ದು ಸಹಕಾರಿ ಬ್ಯಾಂಕ್ ಗಳನ್ನು ಸಹ ನೋಟು ನಿಷೇಧ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಭೇಟಿ ವೇಳೆ ಬಿಜೆಪಿ-ಶಿವಸೇನೆ ನಡುವಿನ ದೀರ್ಘಾವಧಿಯ ಸಂಬಂಧವನ್ನು ಸ್ಮರಿಸಿದ್ದಾರೆ ಎಂದು ತಿಳಿದುಬಂದಿದೆ. 
ಇದೇ ವೇಳೆ ಪ್ರಧಾನಿಗೆ ಶಿವಸೇನೆ ಸಂಸದರು ಎರಡು ಪುಟಗಳ ಪತ್ರವನ್ನು ತಲುಪಿಸಿದ್ದು, ಪತ್ರದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಲಾಗಿದ್ದು, ನೋಟು ನಿಷೇಧ, ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಾವಳಿಗಳ ಪ್ರಕಾರ ಸಹಕಾರಿ ಬ್ಯಾಂಕ್ ಹಾಗೂ ಸಾಲ ಸಂಸ್ಥೆಗಳು ನೋಟು ಬದಲಾವಣೆ ಮಾಡಿಕೊಡುವಂತಿಲ್ಲ. ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿಲ್ಲದೇ ಇಲ್ಲದವರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ  ಸಹಕಾರಿ ಬ್ಯಾಂಕ್ ಗಳನ್ನು ಸಹ ನೋಟು ನಿಷೇಧ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ಶಿವಸೇನೆ ನಾಯಕರು ಪ್ರಧಾನಿಗೆ ಸಲಹೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್