ಸ್ವಿಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ 
ದೇಶ

ಸೆ.2019ರಿಂದ ಸ್ವಿಸ್ ಬ್ಯಾಂಕ್ ಗಳಿಂದ ಭಾರತೀಯ ಖಾತೆದಾರರ ಮಾಹಿತಿ ಲಭ್ಯ

ದೇಶದಲ್ಲಿನ ಕಪ್ಪು ಹಣಕ್ಕೆ ಕೊಳ್ಳೆಯಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ವಿದೇಶಗಳಲ್ಲಿರುವ ಕಪ್ಪು ಹಣದ ಬಗ್ಗೆ ಮಾಹಿತಿ ಪಡೆಯುವ....

ನವದೆಹಲಿ: ದೇಶದಲ್ಲಿನ ಕಪ್ಪು ಹಣಕ್ಕೆ ಕೊಳ್ಳೆಯಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ವಿದೇಶಗಳಲ್ಲಿರುವ ಕಪ್ಪು ಹಣದ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನಕ್ಕೆ ಸ್ವಿಸ್ ಸಾಥ್ ನೀಡಿದ್ದು, ಸೆಪ್ಟೆಂಬರ್ 2019ರಿಂದ ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯ ಖಾತೆಗಳ ವಿವರವನ್ನು ಆಟೋಮ್ಯಾಟಿಕ್ ಆಗಿ ಪಡೆಯಬಹುದಾಗಿದೆ.
ಈ ಸಂಬಂಧ ಸಿಬಿಡಿಟಿ ಅಧ್ಯಕ್ಷ ಸುಶಿಲ್ ಚಂದ್ರ ಹಾಗೂ ಭಾರತದಲ್ಲಿರುವ ಸ್ವಿಸ್ ರಾಜತಾಂತ್ರಿಕ ಅಧಿಕಾರಿ ಗಿಲ್ಲೆಸ್ ರೋಡಿಯಟ್ ಅವರು ಮಂಗಳವಾರ ಉಭಯ ದೇಶಗಳ ನಡುವೆ ಸ್ವಯಂಚಾಲಿತ ಮಾಹಿತಿ ವಿನಿಮಯ(ಎಇಒ)ಕ್ಕಾಗಿ 'ಜಂಟಿ ಘೋಷಣೆ'ಗೆ ಸಹಿ ಹಾಕಿದ್ದಾರೆ.
ಈ ಒಪ್ಪಂದದ ಪ್ರಕಾರ ಸೆಪ್ಟೆಂಬರ್ 2019ರಿಂದ ಸ್ವಿಸ್ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಭಾರತೀಯರ ಬಗ್ಗೆ ಸ್ವಯಂಚಾಲಿತ ಮಾಹಿತಿ ದೊರೆಯಲಿದೆ ಎಂದು ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಅಲ್ಲದೆ ಇದು ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಸಹಾಯಕವಾಗಲಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 6ರಂದು ಸ್ವಿಸ್ ಅಧ್ಯಕ್ಷ ಜೊಹಾನ್‌ ಶ್ನೀಡರ್‌ ಅಮ್ಮಾನ್‌ ಅವರನ್ನು ಭೇಟಿ ಮಾಡಿ, ತೆರಿಗೆ ವಂಚಕರ ಬಗ್ಗೆ ಮಾಹಿತಿ ಪಡೆಯಲು ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದ ಬಗ್ಗೆ ಚರ್ಚಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video