ದೇಶ

ನಿಷೇಧಿತ ನೋಟ್ ಗಳ ಸಾಗಾಟ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

Lingaraj Badiger
ನವದೆಹಲಿ: ಕಪ್ಪು ಕುಳಗಳು ವಿಮಾನದ ಮೂಲಕ ನಿಷೇಧಿತ 500 ಹಾಗೂ 1000 ನೋಟ್ ಗಳನ್ನು ಸಾಗಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನ ಇಳಿದು ನಿಲ್ಲುವ ದಾರಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಬಿಹಾರ ಮೂಲದ ಉದ್ಯಮಿಯೊಬ್ಬರು ಬಾಡಿಗೆ ವಿಮಾನದಲ್ಲಿ 3.5 ಕೋಟಿ ರುಪಾಯಿ ಸಾಗಿಸುತ್ತಿರುವುದು ಪತ್ತೆಯಾಗಿತ್ತು. ಹಿಸ್ಸಾರ್‌ನಿಂದ ಹೊರಟಿದ್ದ ಬಾಡಿಗೆ ಜೆಟ್‌ ವಿಮಾನ ಮಂಗಳವಾರ ಬೆಳಗ್ಗೆ 10.07ಕ್ಕೆ ದೀಮಾಪುರ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಬಿಹಾರದ ಮುಂಗೇರ್‌ ನ ಈ ಉದ್ಯಮಿಯಿಂದ ಭದ್ರತಾ ಅಧಿಕಾರಿಗಳು 3.5 ಕೋಟಿ ರೂ.ಮೌಲ್ಯದ ಹಳೇ ನೋಟುಗಳನ್ನು ವಶಪಡಿಸಿಕೊಂಡಿದ್ದರು.
ಅಕ್ರಮವಾಗಿ ಹಳೆ ನೋಟ್ ಗಳನ್ನು ಸಾಗಿಸುತ್ತಿರುವ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ವಿಮಾನ ನಿಲ್ದಾಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
SCROLL FOR NEXT