ದೇಶ

ನೋಟ್ ಬ್ಯಾನ್ ಎಫೆಕ್ಟ್: 6 ದಿನಗಳಲ್ಲಿ ಶಿರಡಿ ಸಾಯಿಬಾಬಾ ಹುಂಡಿಗೆ ಸೇರಿದ ಹಣವೆಷ್ಟು ಗೊತ್ತಾ?

Shilpa D

ಮುಂಬಯಿ: 500 ಹಾಗೂ 1000 ರು ನೋಟು ನಿಷೇಧಗೊಂಡ ಹಿನ್ನೆಲೆಯಲ್ಲಿ ಶಿರಡಿ ಸಾಯಿ ಬಾಬಾ ಹುಂಡಿ ಕೇವಲ ಆರು ದಿನಗಳಲ್ಲಿ ದಾಖಲೆಯ ಪ್ರಮಾಣದ ಹಣ ಸಂಗ್ರಹಿಸಿದೆ.

ಕಳೆದ ಆರು ದಿನಗಳಲ್ಲಿ ಸಾಯಿಬಾಬಾ ಹುಂಡಿಯಲ್ಲಿ ಎರಡು ಕೋಟಿ ರು ಹಣ ಸಂಗ್ರಹವಾಗಿದೆ. ಭಕ್ತಾದಿಗಳು 500 ಹಾಗೂ 1000 ರು ನೋಟುಗಳನ್ನು ಹುಂಡಿಗೆ ಅರ್ಪಿಸಿದ್ದಾರೆ ಎಂದು ದೇವಾಲಯದ ಟ್ರಸ್ಟಿ ತಿಳಿಸಿದ್ದಾರೆ.

500 ರು ಮುಖಬೆಲೆಯ 9,218 ನೋಟುಗಳು ಹಾಗೂ 1 ಸಾವಿರ ರು ಮುಖ ಬೆಲೆಯ 3,258 ನೋಟುಗಳನ್ನು ಹುಂಡಿಗೆ ಹಾಕಲಾಗಿದೆ, 2ಸಾವಿರ ರು ಮುಖಬೆಲೆಯ 1,100 ನೋಟುಗಳು ಹಾಗೂ ಹೊಸದಾಗಿ ಮುದ್ರಿಸಿರುವ 500 ರು ಮುಖಬೆಲೆಯಯ 51 ನೋಟುಗಳು ಹುಂಡಿಗೆ ಅರ್ಪಿತವಾಗಿವೆ ಎಂದು ದೇವಾಲಯದ ಟ್ರಸ್ಟಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT