ಬಾಲಗಾಟ್: ಮಧ್ಯ ಪ್ರದೇಶದ ಬಾಲಗಾಟ್ ಜಿಲ್ಲೆಯ ವರಸಿಯೊನಿ ಪ್ರದೇಶದಲ್ಲಿ ಬ್ಯಾಂಕೊಂದರಿಂದ 500 ರೂಪಾಯಿಗಳ ಎರಡು ಹೊಸ ನೋಟುಗಳನ್ನು ಕದ್ದ ನಂತರ ಬ್ಯಾಂಕ್ ಒಳಗಿದ್ದ ಸಿಸಿಟಿವಿ ಕ್ಯಾಮರಾ ಮತ್ತು ಇತರ ಉಪಕರಣಗಳಿಗೆ ಬೆಂಕಿ ಹಚ್ಚಿದ 17 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಸಾಯಂಕಾಲ ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಳಗೆ ಹೋದ ಯುವಕ ಅಡಗಿ ಕುಳಿತುಕೊಂಡ. ಬ್ಯಾಂಕ್ ಮುಚ್ಚಿದ ನಂತರ ನೋಟುಗಳನ್ನು ಕದಿಯಲು ಎಲ್ಲಾ ಪ್ರಯತ್ನಗಳನ್ನು ನಡೆಸಿದ. ಆದರೆ 500 ರೂಪಾಯಿಗಳ ಎರಡು ಹೊಸ ನೋಟುಗಳನ್ನು ಕದಿಯಲು ಮಾತ್ರ ಅವನಿಂದ ಸಾಧ್ಯವಾಯಿತು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಅಮಿತ್ ಸಾಂಘಿ ತಿಳಿಸಿದ್ದಾರೆ.
ಮುಸ್ಸಂಜೆ ವೇಳೆ ಬ್ಯಾಂಕ್ ಒಳಗಿದ್ದ ಸಿಸಿಟಿವಿ ಕ್ಯಾಮರಾ ಮತ್ತು ಇತರ ಉಪಕರಣಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲು ಯತ್ನಿಸಿದ್ದಾನೆ. ಬ್ಯಾಂಕ್ ಕಚೇರಿಯ ಒಳಗಿನಿಂದ ಹೊಗೆ ಬರಲಾರಂಭಿಸಿದಾಗ ಸುತ್ತಮುತ್ತಲ ಜನರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಕೂಡಲೇ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics