ದಿಲೀಪ್ ಪಡ್ಗೌಂಕರ್ 
ದೇಶ

ಹಿರಿಯ ಪತ್ರಕರ್ತ ದಿಲೀಪ್ ಪಡ್ಗೌಂಕರ್ ನಿಧನ

ಹಿರಿಯ ಪತ್ರಕರ್ತ ದಿಲೀಪ್ ಪಡ್ಗೌಂಕರ್ ಶುಕ್ರವಾರ ಬೆಳಗ್ಗೆ ಪುಣೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ...

ನವದೆಹಲಿ: ಹಿರಿಯ ಪತ್ರಕರ್ತ ದಿಲೀಪ್ ಪಡ್ಗೌಂಕರ್ ಶುಕ್ರವಾರ ಬೆಳಗ್ಗೆ ಪುಣೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
1968ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಪ್ಯಾರಿಸ್ ವರದಿಗಾರರಾಗಿ ವೃತ್ತಿ ಆರಂಭಿಸಿದ ಪಡ್ಗೌಂಕರ್ 1988ರಲ್ಲಿ ಪತ್ರಿಕೆಯ ಸಂಪಾದಕರಾಗಿ ಬಡ್ತಿ ಹೊಂದಿದ್ದರು. ಆ ಹುದ್ದೆಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ವರ್ಗದ ಜನರೊಂದಿಗೆ ಮಾತುಕತೆ ನಡೆಸಲು 2010ರಲ್ಲಿ ಯುಪಿಎ ಸರ್ಕಾರ ನ ನೇಮಿಸಿದ್ದ ಮೂವರು ಸದಸ್ಯರನ್ನೊಳಗೊಂಡ ಸಂವಾದಕರಲ್ಲಿ ಪಡ್ಗೌಂಕರ್ ಒಬ್ಬರಾಗಿದ್ದರು.
ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂಡಿಯಾ ಟುಡೇ ಟಿವಿಯ ಸಲಹಾ ಸಂಪಾದಕ ರಾಜ್ ದೀಪ್ ಸರ್ ದೇಸಾಯಿ ಟ್ವೀಟ್ ಮಾಡಿ, ನನ್ನ ಮೊದಲ ಸಂಪಾದಕ ದಿಲೀಪ್ ಪಡ್ಗೌಂಕರ್ ಒಬ್ಬ ಸುಸಂಸ್ಕೃತ ಮತ್ತು ಬುದ್ಧಿವಂತ ವ್ಯಕ್ತಿಯಾಗಿದ್ದು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಅವರು ನಮ್ಮನ್ನಗಲಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.
ಹಿರಿಯ ಪತ್ರಕರ್ತ ಸಿದ್ಧಾರ್ಥ್ ವರದರಾಜನ್, ನನ್ನ ಸ್ನೇಹಿತ ಮತ್ತು ಮಾಜಿ ಸಂಪಾದಕ ದಿಲೀಪ್ ಪಡ್ಗೌಂಕರ್ ನಿಧನದ ಸುದ್ದಿಯನ್ನು ಈಗಷ್ಟೇ ಕೇಳಿದೆ. ಅವರ ನಿಧನ ತುಂಬಲಾರದ ನಷ್ಟವಾಗಿದ್ದು, ತುಂಬಾ ದುಃಖವಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!