ಸಿಂಗಾಪುರದ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ತಮ್ಮ ಮೇಣದ ಪ್ರತಿಮೆ ಜತೆ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪ್ರತಿಷ್ಠಿತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಮೇಡಮ್ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದ ಶಾಖೆ ಶೀಘ್ರದಲ್ಲಿ ದೆಹಲಿಯಲ್ಲಿ ಆರಂಭವಾಗಲಿ ಎಂದು ಮ್ಯೂಸಿಯಂಗಳ ನಿರ್ವಾಹಕ ಮೆರ್ಲಿನ್ ಎಂಟರ್ ಟೇನ್ಮೆಂಟ್ ಶುಕ್ರವಾರ ತಿಳಿಸಿದೆ.
ಈಗಾಗಲೇ ಸಿಂಗಪುರ, ಹಾಂಕಾಂಗ್ ಮತ್ತು ಬ್ಯಾಂಕಾಕ್ ಸೇರಿದಂತೆ ವಿಶ್ವದಾದ್ಯಂತ 21 ಶಾಖೆಗಳನ್ನು ಹೊಂದಿದ್ದು, 22 ಶಾಖೆ ದೆಹಲಿಯಲ್ಲಿ ಆರಂಭವಾಗುತ್ತಿದೆ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ಮೆರ್ಲಿನ್ ಎಂಟರ್ ಟೇನ್ಮೆಂಟ್ ಮುಖ್ಯಸ್ಥ ಜಾನ್ ಜಾಕೋಬ್ ಸೇನ್ ಅವರು ಹೇಳಿದ್ದಾರೆ.
2000ದಲ್ಲಿ ಮೊದಲ ಬಾರಿಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಮೇಣದ ಪ್ರತಿಮೆಯನ್ನು ಲಂಡನ್ ನ ಮೇಡಮ್ ಟುಸ್ಸಾಡ್ಸ್ ಕೇಂದ್ರ ವಸ್ತು ಸಂಗ್ರಹಾಲಯದಲ್ಲಿ ಪ್ರತಿಸ್ಠಾಪಿಸಲಾಗಿತ್ತು ಎಂದು ಅವರು ತಿಳಿಸಿದರು.
ಮುಂದಿನ ವರ್ಷದ ಮಧ್ಯದಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್ ನ ರೆಜಲ್ ಸಿನಿಮಾದಲ್ಲಿ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಶಾಖೆ ಆರಂಭವಾಗುತ್ತಿದ್ದು, ಇದು ಎರಡು ಮಹಡಿಗಳಿಗೆ ವಿಸ್ತರಿಸಲಿದೆ ಎಂದು ಜಾನ್ ಹೇಳಿದ್ದಾರೆ.