ದೇಶ

ಭಾರತದಾದ್ಯಂತ ಇಂದು ಸಂವಿಧಾನ ದಿನಾಚರಣೆ

Manjula VN

ನವದೆಹಲಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶದಾದ್ಯಂತ ಶನಿವಾರ ಸಂವಿಧಾನ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಭಾರತ ಸಂವಿಧಾನವನ್ನು ಶಾಸನ ಸಭೆಯಲ್ಲಿ ಅಂಗೀಕರಿಸಿದ ದಿನವಾದ ನವೆಂಬರ್ 26ರ ದಿನವನ್ನು ದೇಶದಾದ್ಯಂತ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ.

ನವೆಂಬರ್ 26ರ ದಿನವನ್ನು ಸಂವಿಧಾನ ದಿನವಾಗಿ ಆಚರಿಸಬೇಕೆಂಬ ವಿಚಾರ ಕೆಲ ವರ್ಷಗಳ ಹಿಂದೆಯೇ ಶಾಸನ ಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ, ಈ ಆಚರಣೆ ಅಧಿಕೃತವಾಗಿ ಜಾರಿಯಾಗಿರಲಿಲ್ಲ. ಕಳೆದ ವರ್ಷವಷ್ಟೇ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿ ಸಂವಿಧಾನಕ್ಕೆ ಗೌರವ ಸೂಚಿಸುವುದಕ್ಕಾಗಿ ನವೆಂಬರ್ 26ರ ದಿನವನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು.

ಸಂವಿಧಾನದ ದಿನದ ಉದ್ದೇಶದ ಸಂವಿಧಾನದ ಮಹತ್ವನ್ನು ಎಲ್ಲರಿಗೂ ತಿಳಿಸಿಕೊಂಡುವುದಾಗಿದ್ದು, ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಸಂವಿಧಾನ ದಿನಾಚರಣೆ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಿದ್ದರು. ಸಂವಿಧಾನದ ವಿಚಾರ ನೆನಪಿಸಿದಾಗಲೆಲ್ಲಾ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸಂವಿಧಾನ ಶಿಲ್ಭಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೆನಪಾಗುತ್ತದೆ.

ಸಂವಿಧಾನದಲ್ಲಿರುವ ಕಾಯ್ದೆಗಳನ್ನು ತಿಳಿದುಕೊಳ್ಳುವುದಕ್ಕಿಂತಲೂ ಸಂವಿಧಾನದ ಜೊತೆಗೆ ಭಾವನಾತ್ಮಕ ಸಂಪರ್ಕವನ್ನು ಹೊಂದುವುದು ಮುಖ್ಯವಾಗುತ್ತದೆ. ಯುವಜನತೆಯಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ನವೆಂಬರ್ 26ನ್ನು ಸಂವಿಧಾನ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ನ.26ರ ಆಚರಣೆ ಇಲ್ಲದೆಯೇ, ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆ ಅಪೂರ್ಣ ಎಂದು ಹೇಳಿದ್ದರು.

SCROLL FOR NEXT