ಸಂಗ್ರಹ ಚಿತ್ರ 
ದೇಶ

ಪಂಜರ ಬಿಟ್ಟು ಹೊರ ಬಂದ ಹೆಣ್ಣು ಹುಲಿ; ಕಂಗಾಲಾದ ಪ್ರವಾಸಿಗರು!

ಹೆಚ್ಚಿನ ಪ್ರಮಾಣದಲ್ಲಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶಗೊಂಡ ಹೆಣ್ಣು ಹುಲಿಯೊಂದು ಪಂಜರದಿಂದ ಹೊರಗೆ ಬಂದ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ.

ಇಂದೋರ್: ಹೆಚ್ಚಿನ ಪ್ರಮಾಣದಲ್ಲಿದ್ದ ಪ್ರವಾಸಿಗರನ್ನು ಕಂಡು ಆಕ್ರೋಶಗೊಂಡ ಹೆಣ್ಣು ಹುಲಿಯೊಂದು ಪಂಜರದಿಂದ ಹೊರಗೆ ಬಂದ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ.

ಭಾನುವಾರ ರಜೆ ದಿನವಾದ್ದರಿಂದ ಇಂದೋರ್ ನಲ್ಲಿರುವ ಕಮ್ಲಾ ನೆಹರೂ ಪ್ರಾಣಿ ಸಂಗ್ರಹಾಲಯಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಈ ವೇಳೆ ಪಂಜರದೊಳಿದ್ದ ಹೆಣ್ಣು ಹುಲಿಯೊಂದು ದಿಢೀರನೇ ಪಂಜರದ ಮೇಲೆ ಹಾರಿ  ಹೊರಗೆ ಬಂದು ಪ್ರವಾಸಿಗರಲ್ಲಿ ಆತಂಕ ಮೂಡಿಸಿತ್ತು. ಹುಲಿ ಹೊರಗೆ ಬರುತ್ತಿದ್ದಂತೆಯೇ ಅಲ್ಲಿದ್ದ ಜನರ ದಿಕ್ಕಾಪಾಲಾಗಿ ಓಡಿ ಹೋಗಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ಆಗಮಿಸಿದ ಮೃಗಾಲಯದ ಸಿಬ್ಬಂದಿ ಸುಮಾರು 90  ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಯಾರಿಗೂ ಹಾನಿಯಾಗದಂತೆ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಗು ಪಂಜರದೊಳಗೆ ಹಾಕಿದ್ದಾರೆ.

ನಿನ್ನೆ ಸಂಜೆ ಸುಮಾರು 5 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರೊಬ್ಬರ ಮಕ್ಕಳು ಬಲೂನು ಹಿಡಿದಿದ್ದರಿಂದ ಗೊಂದಲಕ್ಕೀಡಾದ ಹುಲಿ ಪಂಜರದಿಂದ ಹೊರಗೆ ಬಂದಿದೆ ಎಂದು ಮೃಗಾಲಯದ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಹುಲಿ ಗೊಂದಲದಿಂದ ಹೊರಗೆ ಬಂದಿದೆಯೇ ಹೊರತು ಯಾರಿಗೂ ಹಾನಿ ಮಾಡಿಲ್ಲ. ಹುಲಿ ಶಾಂತವಾಗಿದ್ದು, ಅದನ್ನು ಕೂಡಲೇ ಬಂಧಿಸಿ ಮತ್ತೆ ಪಂಜರದೊಳಗೆ ಬಿಡಲಾಗಿದೆ ಎಂದು ಅವರು  ಹೇಳಿದ್ದಾರೆ.

ಒಟ್ಟಾರೆ ಭಾನುವಾರದ ರಜೆಯನ್ನು ಮೃಗಾಲಯಕ್ಕೆ ಭೇಟಿ ನೀಡಿ ಮಜಾ ಮಾಡಲು ಬಂದಿದ್ದ ಪ್ರವಾಸಿಗರಿಗೆ ಮಾತ್ರ ಹುಲಿ ಹೊರಗೆ ಬರುತ್ತಿದ್ದಂತೆಯೇ ಜೀವ ಬಾಯಿಗೆ ಬಂದ ಅನುಭವವಾಗಿದ್ದಂತೂ ನಿಜ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್