ನಿತ್ಯಾನಂದ ರಾಯ್, ಮನೋಜ್ ತಿವಾರಿ 
ದೇಶ

ಮನೋಜ್ ತಿವಾರಿ ದೆಹಲಿ, ನಿತ್ಯಾನಂದ ರಾಯಿ ಬಿಹಾರ ಬಿಜೆಪಿ ಘಟಕದ ನೂತನ ಅಧ್ಯಕ್ಷರು

ಮನೋಜ್ ತಿವಾರಿ ಅವರನ್ನು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಿಸಿ ರಾಷ್ಟ್ರಾಧ್ಯಕ್ಷ ಅಮಿತ್ ...

ನವದೆಹಲಿ: ಮನೋಜ್ ತಿವಾರಿ ಅವರನ್ನು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಿಸಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.
ಮನೋಜ್ ತಿವಾರಿಯವರು ಸತೀಶ್ ಉಪಾಧ್ಯಾಯ ಅವರ ಸ್ಥಾನವನ್ನು ಈ ಕೂಡಲೇ ಅಲಂಕರಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಬಿಹಾರ ಬಿಜೆಪಿ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ರಾಯಿ ಅವರನ್ನು ನೇಮಿಸಲಾಗಿದೆ. 
ಯಾದವ್ ಕುಟುಂಬಕ್ಕೆ ಸೇರಿದ ನಿತ್ಯಾನಂದ ರಾಯಿ ಅವರನ್ನು ನೇಮಿಸುವ ಮೂಲಕ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಪ್ರತಿಸ್ಪರ್ಧಿಯನ್ನಾಗಿ ಸಜ್ಜುಗೊಳಿಸುವ ಯೋಜನೆ ಬಿಜೆಪಿಯದ್ದು. ಮೇಲ್ವರ್ಗದ ಸಾಂಪ್ರದಾಯಿಕ ಮತದಾರರಲ್ಲದೆ ಇತರ ಹಿಂದುಳಿದ ವರ್ಗಗಳ, ಕೆಳಮಟ್ಟದ ಸಮುದಾಯಗಳನ್ನು ಕೂಡ ತಲುಪುವ ಗುರಿಯನ್ನು ಬಿಜೆಪಿ ಹೊಂದಿದೆ.
ಮನೋಜ್ ತಿವಾರಿಯವರು ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ರಾಯಿ ಬಿಹಾರದ ಉಜಿಯರ್ಪುರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಬಿಹಾರದ ಬಿಜೆಪಿ ಘಟಕದ ನೇತೃತ್ವವನ್ನು ಮಂಗಲ್ ಪಾಂಡೆ ವಹಿಸಿದ್ದರು.
ಬೋಜ್ ಪುರಿ ಗಾಯಕ, ಮನೋಜ್ ತಿವಾರಿ 2014ರಲ್ಲಿ ಈಶಾನ್ಯ ದೆಹಲಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!