ನವದೆಹಲಿ: ಆಲ್ ಖೈದಾ ಉಗ್ರ ಸಂಘಟನೆಯ ಪ್ರೇರಣೆಯಿಂದ ಸ್ಥಾಪನೆಗೊಂಡ "ದಿ ಬೇಸ್ ಮೂವ್‌ಮೆಂಟ್' ನ ಪ್ರಮುಖ ಆಯೋಜಕ, ಸಾಫ್ಟ್ವೇರ್ ಎಂಜಿನಿಯರ್ ದಾವೂದ್ ಸುಲೇಮಾನ್ ದೇಶದ ವಿರುದ್ಧ ಜಿಹಾದ್ ಸಾರಲು ಯೋಜಿಸಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ವಿಶೇಷ ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ.
ಇದು ಜಿಹಾದ್... ಸುಲೇಮಾನ್ ದೇಶದ ವಿರುದ್ಧ ಜಿಹಾದ್ ಸಾರಲು ಬಯಸಿದ್ದ ಎಂದು ಅವರು ತಿಳಿಸಿದ್ದಾರೆ.
ಮೈಸೂರು ಸೇರಿದಂತೆ ದಕ್ಷಿಣ ಭಾರತದ ಐದು ಕೋರ್ಟ್ ಆವರಣಗಳಲ್ಲಿ ಕಳೆದ ಏಪ್ರಿಲ್‌ನಿಂದ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಸುಲೇಮಾನ್ ನನ್ನು ಮಂಗಳವಾರ ಬಂಧಿಸಲಾಗಿದ್ದು. ಆರೋಪಿಯ ವಿರುದ್ಧ ಹಲವು ಕಾನೂನು ಬಾಹಿರ ಕೃತ್ಯ, ಸ್ಫೋಟ ಪ್ರಕರಣ ಹಾಗೂ ಆಸ್ತಿ ಹಾನಿ ಸೇರಿದಂತೆ ಹಲವು ಕಲಂಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ.
23 ವರ್ಷದ ಸುಲೇಮಾನ್ ಎರೋಡ್ ನಲ್ಲಿ ಬಿಟೇಕ್ ಮಾಡಿದ್ದು, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚಿಗಷ್ಟೇ ಮೈಸೂರಿನ ಕೋರ್ಟ್ ಆವರಣದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸುಲೇಮಾನ್ ಪಾತ್ರ ಇದೆ ಎನ್ನಲಾಗಿದೆ.
ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣದ ಐದು ಕೋರ್ಟ್‌ಗಳಲ್ಲಿ ನಡೆದ ಸ್ಫೋಟ ಸಂಬಂಧ ಸೋಮವಾರವಷ್ಟೇ ಎನ್‌ಐಎ ತಮಿಳುನಾಡಿನಲ್ಲಿ ಸುಲೇಮಾನ್ ಸೇರಿದಂತೆ ಮೂವರನ್ನು ಬಂಧಿಸಿತ್ತು. ನಿನ್ನೆ ಮತ್ತಿಬ್ಬರನ್ನು ಬಂಧಿಸಿದ್ದು, ಸೆರೆಸಿಕ್ಕವರ ಸಂಖ್ಯೆ ಐದಕ್ಕೇರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics