ದೇಶ

ಚೂಡಿದಾರ್ ಧರಿಸಿ ಅನಂತ ಪದ್ಮನಾಭ ದೇವಾಲಯಕ್ಕೆ ಬಂದ ಮಹಿಳೆಯರಿಗೆ ನಿರ್ಬಂಧ

Shilpa D

ತಿರುವನಂತಪುರ: ಚೂಡಿದಾರ್ ಧರಿಸಿ ಶ್ರೀ ಅನಂತ ಪದ್ಮನಾಭ ದೇವಾಲಯ ಪ್ರವೇಶಿಸಲು ಬಂದ ಮಹಿಳೆಯರನ್ನು ಹಿಂದು ಸಂಘಟನೆಗಳು ತಡೆದಿವೆ.

ಚೂಡಿದಾರ ಧರಿಸಿ ದೇವಾಸ್ಥಾನದ ಒಳಗೆ ಪ್ರವೇಶಿಸಲು ಮಹಿಳೆಯರು ಮುಂದಾದರು. ಈ ವೇಳೆ ಪೂರ್ವದ್ವಾರಕ್ಕೆ ಬಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ.

ವಸ್ತ್ರ ಸಂಹಿತೆ ಸಡಿಲಗೊಳಿಸಿ ದೇವಾಲಯಕ್ಕೆ ಚೂಡಿದಾರ್ ಧರಿಸಿ ಬರಲು ಅವಕಾಶ ಇದೆ ಎಂದು ಮಂಗಳವಾರ ದೇವಾಲಯ ಕಾರ್ಯಕಾರಿ ಅಧಿಕಾರಿ ಕೆ.ಎನ್ ಸತೀಶ್ ಆದೇಶ ಹೊರಡಿಸಿದ್ದರು.

ಇದರಿಂದಾಗಿ ಇಂದು ಬೆಳಗ್ಗೆಯಿಂದಲೇ ಮಹಿಳಾ ಭಕ್ತಾದಿಗಳು ಚೂಡಿದಾರ ಧರಿಸಿ ಬಂದಿದ್ದರು. ಇದರಿಂದ ಕೆರಳಿದ ಹಿಂದು ಸಂಘಟನೆಗಳು ದೇವಾಸ್ಥಾನದ ಸಂಪ್ರದಾಯವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರ ಪ್ರವೇಶವನ್ನು ತಡೆದಿದ್ದಾರೆ.

ಮಹಿಳೆಯರು ಕಡ್ಡಾಯವಾಗಿ ಸೀರೆ ಹಾಗೂ ಪುರುಷರು ಧೋತಿ ಧರಿಸಬೇಕು ಎಂಬ ನಿಯಮವಿತ್ತು, ಆದರೆ ಈಗ ಮಹಿಳೆಯರು ಚೂಡಿದಾರ್ ಧರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

ತಿರುವನಂತಪುರದ ರಿಯಾ ರಾಜಿ ಎಂಬುವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ವಸ್ತ್ರ ಸಂಹಿತೆ ನೀತಿ ಸಡಿಲಿಸಲಾಗಿದೆ ಎಂದು ದೇವಾಲಯ ಕಾರ್ಯಕಾರಿ ಅಧಿಕಾರಿ ಕೆ,ಎನ್ ಸತೀಶ್ ತಿಳಿಸಿದ್ದರು.

SCROLL FOR NEXT