ದೇಶ

ಅಮೆರಿಕಾದಿಂದ ಫಿರಂಗಿ ಬಂದೂಕು ಖರೀದಿಗೆ ಭಾರತ ಮುಂದು

Sumana Upadhyaya
ನವದೆಹಲಿ: ಮೂರು ದಶಕಗಳ ಹಿಂದಿನ ಕೆಟ್ಟ ಸಂಪ್ರದಾಯವನ್ನು ಮುರಿದಿರುವ ಭಾರತೀಯ ಸೇನೆ ಕೊನೆಗೂ ಎಂ777 ಹಗುರ ಫಿರಂಗಿ ಬಂದೂಕುಗಳ ಖರೀದಿಗೆ ಅಮೆರಿಕಾದ ಕಂಪೆನಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. 
1986ರಲ್ಲಿ ಬೋಫೋರ್ಸ್ ಒಪ್ಪಂದದ ನಂತರ ಲಂಚ ಹಗರಣದಲ್ಲಿ ಸಿಲುಕಿದ ಮೇಲೆ ಭಾರತ ಯಾವುದೇ ಫಿರಂಗಿ ಬಂದೂಕುಗಳನ್ನು ಖರೀದಿಸಿರಲಿಲ್ಲ.
ಸುಮಾರು 737 ಶತಕೋಟಿ ಡಾಲರ್ ಮೊತ್ತದ(5,000 ಕೋಟಿ) ಒಪ್ಪಂದ ಇದಾಗಿದ್ದು, ವಿದೇಶಿ ಮಿಲಿಟರಿ ಮಾರಾಟದಡಿಯಲ್ಲಿ ಫಿರಂಗಿ ಬಂದೂಕುಗಳನ್ನು ತಯಾರಿಸುವ ಅಮೆರಿಕಾದ ಬಿಎಇ ಸಿಸ್ಟಮ್ಸ್ ಜೊತೆಗೆ ಸಹಿ ಮಾಡಿಕೊಳ್ಳಲಾಗಿದೆ. ಕೇಂದ್ರ ಸಂಪುಟ ಅಮೆರಿಕ ಜೊತೆ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ.
ಯುದ್ಧಮಾಡುವ ಸಾಮರ್ಥ್ಯದ ಎಂ777 ಬಂದೂಕನ್ನು ಭಾರತೀಯ ಸೇನೆಗೆ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದು ಬಿಎಇ ಸಿಸ್ಟಮ್ಸ್ ನ ಶಸ್ತಾಸ್ತ್ರ ವ್ಯವಸ್ಥೆಯ ಉಪಾಧ್ಯಕ್ಷ ಜೊ ಸೆನ್ಫ್ಟ್ಲ್ ತಿಳಿಸಿದ್ದಾರೆ. ಎಂ-777 ಹಗುರ ಬಂದೂಕುಗಳನ್ನು ತಯಾರಿಸುವ ಬಿಎಇ ಸಿಸ್ಟಮ್ಸ್, ಮೂಲ ಸ್ವೀಡನ್ ನ ಕಂಪೆನಿಯಾದ ಬೋಫೋರ್ಸ್ ನ ಒಡೆತನವನ್ನು ಹೊಂದಿದೆ.
ಅಧಿಕೃತ ಮೂಲಗಳ ಪ್ರಕಾರ,144 ಹಗುರ ಬಂದೂಕುಗಳಲ್ಲಿ 120ನ್ನು ಜೋಡಿಸಿ ಸಮಗ್ರ ಪರೀಕ್ಷೆಯನ್ನು ಭಾರತದಲ್ಲಿಯೇ ಮಾಡಲಾಯಿತು. ಬಿಎಇ ಸಿಸ್ಟಮ್ಸ್ ಈಗಾಗಲೇ ಭಾರತದಲ್ಲಿ ವ್ಯಾಪಾರ ಪಾಲುದಾರಿಕೆಯನ್ನು ಮಹೀಂದ್ರಾ ಜೊತೆ ಮಾಡಿಕೊಂಡಿದೆ. 25 ಗನ್ ಗಳು ಭಾರತಕ್ಕೆ ಆಗಮನದ ಹಂತದಲ್ಲಿವೆ ಎಂದು ತಿಳಿದುಬಂದಿದೆ.
SCROLL FOR NEXT