ಮುಂಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದ ಸೀಮಿತ ದಾಳಿ ನಕಲಿ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.
ಪ್ರತಿಯೊಬ್ಬ ಭಾರತೀಯನಿಗೂ ಪಾಕಿಸ್ತಾನ ವಿರುದ್ಧ ಸೀಮಿತಿ ದಾಳಿ ಬೇಕಿದೆ. ಆದರೆ ಅದು ನಕಲಿ ಸೀಮಿತ ದಾಳಿಯಾಗಿರಬಾರದು ಎಂದು ನಿರುಪಮ್ ಟ್ವೀಟಿಸಿದ್ದು, ಭಾರತೀಯರ ಉದ್ದೇಶವನ್ನು ಬಿಜೆಪಿ ತಮ್ಮ ರಾಜಕೀಯವಾಗಿ ಬೆಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.