ಪಟಿಯಾಲ: ಮಹಿಳೆಯೊಬ್ಬರ ಹಣೆಯ ಮೇಲೆ ಕಿಸೆಗಳ್ಳಿ ಎಂಬ ಟ್ಯಾಟು ಹಾಕಿಸಿದ್ದ 23 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಮೂವರು ಪೊಲೀಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.
ಸಿಬಿಐ ನ ವಿಶೇಷ ನ್ಯಾಯಮೂರ್ತಿ ಬಲ್ಜಿಂದರ್ ಸಿಂಗ್ ಮಾಜಿ ಎಸ್ ಪಿ ಸುಖ್ ದೇವ್ ಸಿಂಗ್, ಎಸ್ ಐ ನರಿಂದರ್ ಸಿಂಗ್ (ರಾಮ್ ಬಾಗ್ ಪೊಲೀಸ್ ಠಾಣೆಯ ಅಂದಿನ ಎಸ್ ಹೆಚ್ ಒ), ಎಎಸ್ಐ ಕನ್ವಾಲ್ಜಿತ್ ಸಿಂಗ್ ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಅಮೃತ್ ಸರದಲ್ಲಿ ಪೊಲೀಸ್ ಅಧಿಕಾರಿಗಳು ಕಳ್ಳತನ, ಅಕ್ರಮಗಳಲ್ಲಿ ತೊಡಗಿದ್ದ ಮಾಡುತ್ತಿದ್ದ ಮಹಿಳೆಯ ಹಣೆಯ ಮೇಲೆ ಜೇಬ್ ಕತ್ರಿ( ಕಿಸೆಗಳ್ಳಿ) ಎಂಬ ಟ್ಯಾಟು ಹಾಕಿಸಿದ್ದರು. 1993 ರಲ್ಲಿ ನಡೆದ ಈ ಘಟನೆ ವಿರುದ್ಧ ವ್ಯಾಪಕ ಟಿಕೆ ವ್ಯಕ್ತವಾಗಿತ್ತು. ಪ್ರಕರಣವೊಂದರ ವಿಚಾರಣೆ ವೇಳೆ ಮಹಿಳೆಯನ್ನು ಕೋರ್ಟ್ ಗೆ ಹಾಜರು ಪಡಿಸಿದಾಗ ಮಹಿಳೆ ತನ್ನ ಹಣೆಯನ್ನು ದುಪ್ಪಟ್ಟಾದಿಂದ ಮುಚ್ಚಿಕೊಂಡಿದ್ದರು. ಇದಕ್ಕೆ ಪೊಲೀಸರು ಅವಹೇಳನಕಾರಿ ಟ್ಯಾಟೂ ಹಾಕಿಸಿದ್ದೇ ಕಾರಣ ಎಂದು ನಂತರ ತಿಳಿದುಬಂದಿತ್ತು. ಪೋಲೀಸರ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದ ಪ್ರಕರಣಕ್ಕೆ 23 ವರ್ಷಗಳ ನಂತರ ತೀರ್ಪು ಬಂದಿತ್ತು ಘಟನೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳಿಗೆ ಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.