ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ 
ದೇಶ

ಸೀಮಿತ ದಾಳಿ ನಂತರ ವಿಶ್ವ ಇದೀಗ ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ: ಮೋಹನ್ ಭಾಗವತ್

ವಿಶ್ವದಲ್ಲಿ ಏನನ್ನೇ ನಿಯಂತ್ರಿಸಬೇಕಾದರೂ ಅದು ಶಕ್ತಿಯಿಂದ ಮಾತ್ರ ಸಾಧ್ಯ. ಭಾರತ ತನ್ನಲ್ಲಿರುವ ಶಕ್ತಿಯನ್ನು ಪ್ರದರ್ಶಿಸಿದ ನಂತರ ಇಡೀ ವಿಶ್ವ ಇದೀಗ ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ...

ನಾಗ್ಪುರ: ವಿಶ್ವದಲ್ಲಿ ಏನನ್ನೇ ನಿಯಂತ್ರಿಸಬೇಕಾದರೂ ಅದು ಶಕ್ತಿಯಿಂದ ಮಾತ್ರ ಸಾಧ್ಯ. ಭಾರತ ತನ್ನಲ್ಲಿರುವ ಶಕ್ತಿಯನ್ನು ಪ್ರದರ್ಶಿಸಿದ ನಂತರ ಇಡೀ ವಿಶ್ವ ಇದೀಗ ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.

ಸೀಮಿತ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತಕ್ಕೆ ಯಾವಾಗ ಸಂಕಷ್ಟ ಬಂದರೂ ಅಮೆರಿಕ ಮಾತ್ರ ಯಾವಾಗಲೂ ನಮಗೇ ಸುಮ್ಮನಿರಿ ಎಂದು ಹೇಳುತ್ತಿತ್ತು. ಸೀಮಿತ ದಾಳಿ ಬಳಿಕ ಇದೀಗ ಇಡೀ ವಿಶ್ವವೇ ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಪಂಚದಲ್ಲಿ ಕೆಟ್ಟದಾಗಲಿ ಅಥವಾ ಒಳ್ಳೆಯದೇ ಆಗಲಿ ಎಲ್ಲವನ್ನೂ ಶಕ್ತಿಯಿಂದ ಮಾತ್ರ ನಿಯಂತ್ರಿಸಲು ಸಾಧ್ಯ. ಈ ಹಿಂದೆ ಭಾರತ ಎಂದಿಗೂ ತನ್ನ ಶಕ್ತಿಯನ್ನು ಪ್ರದರ್ಶಿಸಿರಲಿಲ್ಲ. ಭಾರತಕ್ಕೆ ಯಾವುದೇ ರೀತಿಯ ಸಂಕಷ್ಟ ಎದುರಾದರೂ ಅಮೆರಿಕ ಮಾತ್ರ ಸುಮ್ಮನಿರಿ ಎಂದು ಭಾರತಕ್ಕೇ ಹೇಳುತ್ತಿತ್ತು. ಇದೀಗ ಭಾರತ ತನ್ನಲ್ಲಿರುವ ಶಕ್ತಿಯನ್ನು ವಿಶ್ವದೆದುರು ಪ್ರದರ್ಶಿಸಿದೆ.

ಯಾವುದೇ ರಾಷ್ಟ್ರದ ಅಭಿಪ್ರಾಯವನ್ನು ಪಡೆಯದೆಯೇ. ನಾವು ಸ್ವಂತವಾಗಿ ನಿರ್ಧಾರವನ್ನು ಕೈಗೊಂಡು ಶಕ್ತಿಯನ್ನು ಪ್ರದರ್ಶಿಸಿದ್ದೇವೆ. ಭಾರತ ಶಕ್ತಿ ಪ್ರದರ್ಶಿಸಿ ನಂತರ ಇದೀಗ ಇಡೀ ವಿಶ್ವ ಭಾರತಕ್ಕೆ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT