ಕಾನ್ಪುರ: ಗರ್ಭಪಾತ ಮಾಡಿಸಲು ನಿರಾಕರಿಸಿದ ತನ್ನ ಪತ್ನಿಯನ್ನೇ ವಕೀಲ ಪತಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ನಡೆದಿದೆ.
ಕೊಲೆಯಾದ ಮಹಿಳಾ ನ್ಯಾಯಾಧೀಶೆ ಪ್ರತಿಭಾ ಗೌತಮ್‌ರ‌್ ನ್ನು ಅವರ ಪತಿ ಮನು ಅಭಿಷೇಕ್ ಕೊಲೆ ಮಾಡಿದ್ದಾನೆ. ಮೃತ ಪ್ರತಿಭಾ ಕಾನ್ಪುರ್ನ ಜ್ಯುಡಿಶಿಯಲ್ ಮ್ಯಾಜಿಸ್ಟ್ರೆಟ್ ಆಗಿದ್ದರು.
ಆರೋಪಿ ಮನು ದೆಹಲಿ ಹೈಕೋರ್ಟ್‌ನಲ್ಲಿ ವಕೀಲ. ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ನ್ಯಾ. ಪ್ರತಿಭಾ ಮೃತದೇಹ ಪತ್ತೆಯಾಗಿತ್ತು. ನ್ಯಾ.ಪ್ರತಿಭಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನು ಪೊಲೀಸರಿಗೆ ದೂರು ನೀಡಿದ್ದ.
ಆದರೆ ಪ್ರತಿಭಾ ಪೋಷಕರು ಅಳಿಯನ ಮೇಲೆ ಸಂದೇಹ ವ್ಯಕ್ತ ಪಡಿಸಿ ಕೇಸು ದಾಖಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ನ್ಯಾ. ಪ್ರತಿಭಾರ ಮೃತದೇಹದ ಮೇಲೆ 20 ಗಾಯಗಳು ಪತ್ತೆಯಾಗಿವೆ. ಪ್ರತಿಭಾ ಮೂರುವರೆ ತಿಂಗಳ ಗರ್ಭಿಣಿಯಾಗಿದ್ದರು. ಜೊತೆಗೆ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಯಿತು. ನಂತರ ಆರೋಪಿ ವಕೀಲನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.