ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ಬ್ರಿಕ್ಸ್ ಮೂಲಕ ಹೊಸ ಸಂಬಂಧ ಸೇತುವೆ ಬೆಸೆಯುವ ಭರವಸೆಯಲ್ಲಿ ಪ್ರಧಾನಿ ಮೋದಿ

ದೇಶಗಳ ಹಲವು ಆಳವಾದ ಸಮಸ್ಯೆಗಳಿಗೆ ಸಾಮಾನ್ಯವಾದ ಪರಿಹಾರ ಕಂಡುಹಿಡಿಯಲು, ಹೊಸ ಸಹಭಾಗಿತ್ವಕ್ಕಾಗಿ...

ನವದೆಹಲಿ: ದೇಶಗಳ ಹಲವು ಆಳವಾದ ಸಮಸ್ಯೆಗಳಿಗೆ ಸಾಮಾನ್ಯವಾದ ಪರಿಹಾರ ಕಂಡುಹಿಡಿಯಲು, ಹೊಸ ಸಹಭಾಗಿತ್ವಕ್ಕಾಗಿ ಸಂಬಂಧ ಬೆಸೆಯಲು ತಾವು ಬ್ರಿಕ್ಸ್ ಮತ್ತು ಬಿಮ್ಸ್ಟೆಕ್ ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗೋವಾದಲ್ಲಿ ಅವರು ಶೃಂಗಸಭೆಯ ಹೊರಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಭಾರತ ದೇಶದ ಗುರಿಯತ್ತ ಸಾಗುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸವಾಲುಗಳನ್ನು ಎದುರಿಸುವ ಬಗ್ಗೆಯೂ ಅವರು ಚರ್ಚಿಸಲಿದ್ದಾರೆ. ಬ್ರಿಕ್ಸ್ ಶೃಂಗಸಭೆ ಆಂತರಿಕ ಬ್ರಿಕ್ಸ್ ಸಹಕಾರ ಮತ್ತು ಅಭಿವೃದ್ಧಿ, ಶಾಂತಿ, ಸ್ಥಿರತೆ ಮತ್ತು ಸುಧಾರಣೆಯನ್ನು ಬಲಪಡಿಸಲಿದೆ ಎಂದು ಪ್ರಧಾನ ಮಂತ್ರಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಬ್ರಿಕ್ಸ್ ದೇಶಗಳ ಯಶಸ್ವಿ ಕಾರ್ಯನಿರ್ವಹಣೆ ಅಭಿಯಾನಗಳನ್ನು ಶೃಂಗಸಭೆಯಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು ಉಲ್ಲೇಖಿಸಿದ ಅವರು, ಪುಟಿನ್ ಅವರ ಭಾರತ ಭೇಟಿ ರಷ್ಯಾ ಜೊತೆ ಹೊಸ, ವಿಶಿಷ್ಟ ಸಹಭಾಗಿತ್ವ ಮತ್ತು ಸ್ನೇಹಕ್ಕೆ ನಾಂದಿ ಹಾಡಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಕಾರ್ಯತಂತ್ರ ಸಹಭಾಗಿತ್ವದಲ್ಲಿ ಬ್ರೆಝಿಲ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿರುವ ಮೋದಿ, ಅಲ್ಲಿನ ಅಧ್ಯಕ್ಷ ಮೈಕೆಲ್ ಟೆಮರ್ ಅವರ ಭಾರತ ಭೇಟಿ ಆ ರಾಷ್ಟ್ರದ ಜೊತೆ ಹೊಸ ಸಹಕಾರಕ್ಕೆ ನಾಂದಿ ಹಾಡಲಿದೆ. ಈ ವರ್ಷ ಬ್ರಿಕ್ಸ್ ಶೃಂಗಸಭೆಯ ಆತಿಥೇಯ ವಹಿಸುತ್ತಿರುವ ಭಾರತ ವ್ಯಾಪಾರ, ಕ್ರೀಡೆ, ಶಿಕ್ಷಣ, ಚಲನಚಿತ್ರ, ಸ್ಕಾಲರ್ ಷಿಪ್ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಜನರ-ಜನರ ಮಧ್ಯೆ ಸಂಬಂಧಕ್ಕೆ ಒತ್ತು ನೀಡಲಿದೆ ಎಂದು ಹೇಳಿದ್ದಾರೆ.
ಗೋವಾದಲ್ಲಿ ಬ್ರಿಕ್ಸ್-ಬಿಮ್ಸ್ಟೆಕ್ ಶೃಂಗಸಭೆ ನಂತರ ನಾಳೆ ಮತ್ತು ನಾಡಿದ್ದು ಬ್ರಿಕ್ಸ್ ಶೃಂಗಸಭೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು