ನವದೆಹಲಿ: ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಇನ್ನಿತರ ಮುಸ್ಲಿಂ ಸಂಘಟನೆಗಳು ಏಕರೂಪ ನಾಗರಿಕ ಸಂಹಿತೆ ಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ದೇಶಾದ್ಯಂತ ಈ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.
ಕೇಂದ್ರ ಕಾನೂನು ಆಯೋಗದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿರುವ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಏಕರೂಪ ನಾಗರಿಕ ಸಂಹಿತೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿತ್ತು. ಅಲ್ಲದೆ ಕೇಂದ್ರ ಸರ್ಕಾರ ಒಂದು ಸಮುದಾಯದ ವಿರುದ್ಧ ಯುದ್ಧ ಘೋಷಿಸಿರುವ ಗಂಭೀರ ಆರೋಪ ಮಾಡಿತ್ತು. ಕೇಂದ್ರ ಕಾನೂನು ಆಯೋಗ ಅ.7 ರಂದು ತನ್ನ ವೆಬ್ ಸೈಟ್ ( lawcommissionofindia.nic.in/questionnaire.pdf , lawcommissionofindia.nic.in/hindiqn.pdf )
ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಸಾರ್ವಜನಿಕರಿಂದ 16 ಪ್ರಶ್ನೆಗಳಿಗೆ ಉತ್ತರ ಕೇಳಿದೆ. ಈ ಪ್ರಶ್ನೆಗಳಿಗೆ ಸಾರ್ವಜನಿಕರು ಉತ್ತರಿಸಬಹುದಾಗಿದೆ.
ಸಮಾನ ನಾಗರಿಕ ಸಂಹಿತೆ ಕುರಿತಂತೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿಯೇ ಕೇಂದ್ರ ಆಯೋಗ 16 ಪ್ರಶ್ನೆಗಳನ್ನು ಕೇಳಿದ್ದು ಸಾರ್ವಜನಿಕರು ಮುಕ್ತ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ.