ನವದೆಹಲಿ: ಹೊಸ ನಿಯಮದ ಪ್ರಕಾರ, ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಪಡೆಯುವ ಎಲ್ಲಾ ಸೇವೆಗಳು ಮತ್ತು ಪ್ರಯೋಜನಗಳ ದಾಖಲೆಗಳನ್ನು ಏಳು ವರ್ಷಗಳವರೆಗೆ ಸರ್ಕಾರ ಉಳಿಸಿಕೊಳ್ಳಲಿದೆ.
ಅಂಕಿಅಂಶಗಳನ್ನು ಯಾರಾದರೂ ಕಣ್ಗಾವಲಾಗಿ ಬಳಸಿಕೊಳ್ಳಬಹುದು ಎಂಬ ಭಯದಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಎಐ)ದಾಖಲೆಗಳನ್ನು ರಕ್ಷಿಸಿಡಲಿದೆ. ಎಲ್ಲಾ ನಾಗರಿಕರಿಗೂ 12 ಅಂಕೆಗಳ ಬಯೋಮೆಟ್ರಿಕ್ ಸಂಖ್ಯೆಯನ್ನು ನೀಡಲಾಗುತ್ತದೆ.
ಮಾಹಿತಿಗಳನ್ನು ಆನ್ ಲೈನ್ ನಲ್ಲಿ ಎರಡು ವರ್ಷಗಳವರೆಗೆ ಮತ್ತು ಆಫ್ ಲೈನ್ ನಲ್ಲಿ ಐದು ವರ್ಷಗಳವರೆಗೆ ಇಡಲಾಗುತ್ತದೆ ಎಂದು ಸೆಪ್ಟೆಂಬರ್ ನಲ್ಲಿ ಬಂದ ಹೊಸ ಕಾನೂನು ಹೇಳುತ್ತದೆ.
ಬಳಕೆದಾರರು ಎರಡು ವರ್ಷಗಳವರೆಗೆ ದಾಖಲೆಗಳನ್ನು ಪರೀಕ್ಷಿಸುತ್ತಿರಬಹುದು. ಈ ನಿಯಮ ಭದ್ರತಾ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. '' ಕಾಳಜಿಯನ್ನು ಉತ್ಪ್ರೇಕ್ಷೆ ಮಾಡಲಾಗಿದೆ. ವಹಿವಾಟಿನಲ್ಲಿ ಏನೇ ವಿವಾದಗಳೆದ್ದರೆ ಎಂದು ಸಂಸ್ಥೆಯು ದಾಖಲೆಗಳನ್ನು ಇಟ್ಟುಕೊಳ್ಳುತ್ತದೆ ಎಂದು ಯುಐಎಐಯ ಮುಖ್ಯ ಕಾರ್ಯಕಾರಿ ಅಧಿಕಾರಿ ಎಬಿಪಿ ಪಾಂಡೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಕಾನೂನು ಪ್ರಕಾರ, ಸರ್ಕಾರದ ಅಭಿವೃದ್ಧಿ ಯೋಜನೆಗಳ ಫಲ ಪಡೆಯಲು ನಾಗರಿಕರರಿಗೆ ಆಧಾರ್ ಕಾರ್ಡು ಕಡ್ಡಾಯವಲ್ಲ. ಆಧಾರ್ ಪ್ರಾಧಿಕಾರದ ದಾಖಲೆಗಳ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 5 ದಶಲಕ್ಷ ಆಧಾರ್ ಬಳಕೆದಾರರಿದ್ದು ಎಲ್ ಪಿಜಿ ಸಬ್ಸಿಡಿ, ರೇಷನ್ ಕಾರ್ಡು ಇತ್ಯಾದಿ ಬಳಕೆಗೆ ಅನುಕೂಲವಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos