ನವದೆಹಲಿ: ನೊಬೆಲ್ ಮಾದರಿಯಲ್ಲಿ ತನ್ನದೇ ಆದ ಪ್ರಶಸ್ತಿ ನೀಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಸ್ತಾವನೆಗೆ ಕೇಂದ್ರ ಸಂಸ್ಕೃತಿ ಇಲಾಖೆ ಒಪ್ಪಿಗೆ ನೀಡಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಕೃತಿ ವಿಭಾಗ ಸಂಸ್ಕಾರ ಭಾರತಿ ಸಂಘಟನೆ ಶಾಂತಿ, ಮಾನವ ಹಕ್ಕು, ಸಾಹಿತ್ಯ, ಕಲೆ, ವಿಜ್ಞಾನ, ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನೊಬೆಲ್ ಪ್ರಶಸ್ತಿಯ ರೀತಿಯಲ್ಲಿ ತನ್ನದೇ ಆದ ನೊಬೆಲ್ ಪ್ರಶಸ್ತಿ ಕೊಡಮಾಡುವ ಪ್ರಸ್ತಾವನೆ ಹೊಂದಿತ್ತು. ಸಂಸ್ಕೃತಿ ಇಲಾಖೆಯ ಮೂಲಗಳ ಪ್ರಕಾರ ಆರ್ ಎಸ್ ಎಸ್ ಕೊಡಮಾಡಲು ಉದ್ದೇಶಿಸಲಾಗಿರುವ ನೈಮಿಷ್ಯ ಸಮ್ಮಾನ್ ಪ್ರಶಸ್ತಿ ಸ್ಥಾಪನೆಗೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ನವೆಂಬರ್ ನಲ್ಲಿ ವಾರಾಣಸಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದಲ್ಲಿ ಮೊದಲುಗೊಳ್ಳಲಿರುವ ನೈಮಿಷ್ಯ ಸಮ್ಮಾನ್ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಸಂಸ್ಕೃತಿ ಮಹೋತ್ಸವವನ್ನು ಒಟ್ಟು 220 ಕೋಟಿ ರೂ ವೆಚ್ಚದಲ್ಲಿ ನಡೆಸಲಾಗುತ್ತಿದ್ದು, 70 ಕೋಟಿ ರೂಪಾಯಿಯನ್ನು ಪ್ರಶಸ್ತಿಗಳಿಗಾಗಿ ವಿನಿಯೋಗಿಸಲಾಗುತ್ತದೆ