ದೇಶ

ತಿರುಪತಿ ದೇವಾಲಯ 1 ಸಾವಿರ ಕೋಟಿ ಬಾಕಿ ನೀಡಬೇಕು: ತೆಲಂಗಾಣ ಅರ್ಚಕನಿಂದ ಕೇಸ್

Shilpa D

ತಿರುಪತಿ: ತೆಲಂಗಾಣ ರಾಜ್ಯಕ್ಕೆ ತಿರುಪತಿ ದೇವಸ್ಥಾನವು ಸಾವಿರ ಕೋಟಿ ರೂ. ಬಾಕಿ ಇದ್ದು, ಅದನ್ನು ಕೂಡಲೇ ಕೊಡಿಸಬೇಕೆಂದು ತೆಲಂಗಾಣದ ಅರ್ಚಕರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಚಿಲಕೂರು ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸೌಂದರ್ ರಾಜನ್ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದಾರೆ.

ದೇಶದಲ್ಲೇ ಅತಿ ಶ್ರೀಮಂತ ದೇವರು ಎನಿಸಿಕೊಂಡಿರುವ ತಿರುಪತಿ ತಿಮ್ಮಪ್ಪ ದೇವಾಲಯ ಆಂಧ್ರ ಪ್ರದೇಶದಲ್ಲಿದೆ. ತಿಮ್ಮಪ್ಪನಿಗೆ ಬರುವ ಆದಾಯದಲ್ಲಿ ಒ ಸಾವಿರ ಕೋಟಿ ರೂ ಹಣವನ್ನು ನೀಡಬೇಕು, ಟಿಟಿಡಿ ಟ್ರಸ್ಟ್ ತೆಲಂಗಾಣದ ನೂರಾರು ದೇವಾಲಯಗಳನ್ನು ನಿರ್ಲಕ್ಷ್ಯಿಸಿದೆ ಎಂದು ಅವರು ಆರೋಪಿಸಿದ್ದಾರೆ.

1987ರಿಂದ 2014ರವರೆಗೆ ತೆಲಂಗಾಣ ದೇವಸ್ಥಾನಗಳ ಅಭಿವೃದ್ಧಿಗಾಗಿ ಸಾಕಷ್ಟು ಮೊತ್ತದ ಹಣ ಬಿಡುಗಡೆ ಮಾಡಿಲ್ಲ. ಕೇವಲ 56ಲಕ್ಷರೂ. ನೀಡಿದೆ. ಆದ್ದರಿಂದ ಸಾವಿರ ಕೋಟಿ ರೂ. ಹಣವನ್ನು ನೀಡುವಂತೆ ಆದೇಶ ಹೊರಡಿಸಬೇಕೆಂದು ಅವರು ನ್ಯಾಯಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

SCROLL FOR NEXT