ದೇಶ

ಬಿಹಾರ ಉಪ ಮುಖ್ಯಮಂತ್ರಿಗೆ ಬಂದಿವೆ 44 ಸಾವಿರ ಮದುವೆ ಪ್ರಸ್ತಾವನೆ!

Lingaraj Badiger
ಪಾಟ್ನಾ: ಬಿಹಾರ ಉಪ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ವಾಟ್ಸ್ ಆಪ್ ಮೂಲಕ 44 ಸಾವಿರ ಮದುವೆ ಪ್ರಸ್ತಾವನೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳಪೆ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ದೂರು ನೀಡಲು ಉಪ ಮುಖ್ಯಮಂತ್ರಿ ನೀಡಿದ್ದ ವಾಟ್ಸ್ ಆಪ್ ನಂಬರ್ ಪ್ರಿಯಾ, ಅನುಪಮಾ, ಮನಿಶಾ, ಕಾಂಚನ ಮತ್ತು ದೇವಿಕಾ ಸೇರಿದಂತೆ ಸುಮಾರು 44 ಸಾವಿರ ಮದುವೆ ಪ್ರಸ್ತಾವೆನಗಳನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯಾದವ್ ಅವರ ನಂಬರ್ ಒಟ್ಟು 47 ಸಾವಿರ ವಾಟ್ಸ್ ಆಪ್ ಸಂದೇಶಗಳು ಬಂದಿದ್ದು, ಈ ಪೈಕಿ 44 ಸಾವಿರ ಸಂದೇಶಗಳು ಯಾದವ್ ಅವರ ಮದುವೆಗೆ ಸಂಬಂಧಿಸಿವೆ. ರಸ್ತೆ ದುರಸ್ಥಿಗೆ ಸಂಬಂಧಿಸಿದಂತೆ ಕೇವಲ 3 ಸಾವಿರ ಸಂದೇಶಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಹಲವು ಯುವತಿಯರು, ತಮ್ಮ ಫೋಟೋ, ಬಣ್ಣ, ಎತ್ತರ ಹಾಗೂ ಇತರೆ ವೈಯಕ್ತಿಕ ವಿವರಗಳನ್ನು ಸಂದೇಶದಲ್ಲಿ ತಿಳಿಸಿದ್ದಾರೆ.
26 ವರ್ಷದ ಯಾದವ್ ಅವರು ಒಬ್ಬ ಕ್ರಿಕೆಟಿಗ ಹಾಗೂ ರಾಜಕಾರಣಿಯಾಗಿದ್ದು, ಬಿಹಾರ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಹಾಗೂ ರಾಬ್ರಿ ದೇವಿ ಅವರ ಕಿರಿಯ ಪುತ್ರ
ಈ ಬಗ್ಗೆ ತಮಾಷೆ ಮಾಡಿರುವ ತೇಜಸ್ವಿ ಯಾದವ್ ಅವರು, ಅಂತಹ ವೈಯಕ್ತಿಕ ಸಂದೇಶಗಳಿಂದಾಗಿ ತಾವು ಮದುವೆ ವಿಚಾರವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದಾಗಿ ಮತ್ತು ಥ್ಯಾಂಕ್ ಗಾಡ್ ನಾನು ಇನ್ನೂ ಏಕಾಂಗಿ ಎಂದಿದ್ದಾರೆ.
SCROLL FOR NEXT