ದೇಶ

ಬಸ್ತಾರ್'ನಲ್ಲಿ 15 ಮಾವೋವಾದಿಗಳು ಪೊಲೀಸರಿಗೆ ಶರಣು

Manjula VN

ಚಂಡೀಗಢ: ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ 15 ಮಾವೋವಾದಿಗಳು ಬಸ್ತಾರ್ ಪೊಲೀಸರ ಬಳಿ ಶರಣಾಗಿದ್ದಾರೆಂದು ಶನಿವಾರ ಮೂಲಗಳಿಂದ ತಿಳಿದುಬಂದಿದೆ.

ಪ್ರಸ್ತುತ್ ಶರಣಾಗಿರುವ ಮಾವೋವಾದಿಗಳು ಮರ್ಡೂಮ್ ಮತ್ತು ದರ್ಬಾ ಪ್ರದೇಶದಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. 15 ಮಂದಿಯ ವಿರುದ್ಧವೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.
 
ಬಂಧಿತರಾಗಿರುವ ಮಾವೋವಾದಿಗಳು ಪಿಎಲ್ ಜಿಎ ( ಪೀಪಲ್ಸ್ ಲಿಬರೇಷನ್ ಗೋರಿಲ್ಲಾ ಸೇನೆ) ಎಂಬ ಸಂಘಟನೆಗೆ ಸೇರಿದವರಾಗಿದ್ದು, ಈ ಸಂಘಟನೆಯಲ್ಲಿ 6,500 ರಿಂದ 9,500 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಭಾರತ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಇವರು, ಭೂಮಿ ಹಕ್ಕು, ಉದ್ಯೋಗಾವಕಾಶ ಮತ್ತು ಕೃಷಿಕರ ಮೇಲಿರುವ ನಿರ್ಲಕ್ಷ್ಯತನ ಹಾಗೂ ಬಡವರಿಗಾಗಿ ಹೋರಾಟ ಮಾಡುತ್ತಿದ್ದೇವೆಂದು ಹೇಳಿಕೊಂಡು ಬಿಹಾರ, ಜಾರ್ಖಾಂಡ್, ಛತ್ತೀಸ್ಗಢ, ಪಶ್ಚಿಮ ಬಂಗಾಳ ಹಾಗೂ ಆಂದ್ರ ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದರು.

ಇದಲ್ಲದೆ, ಬುಡಕಟ್ಟು ಜನರು, ಪೊಲೀಸರು ಹಾಗೂ ಸರ್ಕಾರಿ ಕೆಲಸಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರ ಬಳಿ ಶರಣಾಗಿರುವ ಮಾವೋವಾದಿಗಳು ಹೇಳಿಕೊಂಡಿದ್ದಾರೆಂದು ಮೂಲಗಳು ಮಾಹಿತಿ ನೀಡಿದೆ.

SCROLL FOR NEXT