ವಡೋದರದ ಹರ್ನಿಯಲ್ಲಿ ಹಸಿರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ವಡೋದರ: ದೇಶದ ಎರಡನೇ ಹಸಿರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಕೊಚ್ಚಿಯ ನಂತರ ದೇಶದ ಎರಡನೇ ಹಸಿರು ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್ ನ...

ವಡೋದರ: ಕೊಚ್ಚಿಯ ನಂತರ ದೇಶದ ಎರಡನೇ ಹಸಿರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್ ನ ವಡೋದರದಲ್ಲಿ ಶನಿವಾರ ದೇಶಕ್ಕೆ ಸಮರ್ಪಿಸಿದರು. ಇಂತಹ ಯೋಜನೆಗಳು ಜನರು ಹೆಚ್ಚೆಚ್ಚು ಪರಿಸರ ಸ್ನೇಹಿ ನಿರ್ಮಾಣಗಳನ್ನು ಮಾಡುವಂತೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು.
'' ಹಸಿರು ವಿಮಾನ ನಿಲ್ದಾಣ ವಡೋದರ ನಗರಕ್ಕೆ ಇನ್ನೊಂದು ಕೀರ್ತಿ ತಂದುಕೊಡಲಿದೆ. ಈ ವಿಮಾನ ನಿಲ್ದಾಣದಲ್ಲಿ ಹೊಗೆಯಾಗಲಿ, ಕಸಕಡ್ಡಿಯಾಗಲಿ ಉತ್ಪತ್ತಿಯಾಗುವುದಿಲ್ಲ. ಇಂಧನ ಉಳಿತಾಯವಾಗಲಿದ್ದು ಪರಿಸರ ಸ್ನೇಹಿಯಾಗಿದೆ. ಇದು ದೇಶದ ಅತಿ ಉನ್ನತ ಮಟ್ಟದ ವಿಮಾನ ನಿಲ್ದಾಣವಾಗಿ ಪರಿಗಣಿಸಲ್ಪಡುತ್ತದೆ ಎಂದು ಪ್ರಧಾನಿ ಹೇಳಿದರು.
ವಿಮಾನಯಾನ ಚಟುವಟಿಕೆಗಳಲ್ಲಿ ನಮ್ಮ ದೇಶ ವಿಶ್ವದಲ್ಲಿಯೇ ಮೂರನೆ ಸ್ಥಾನ ಗಳಿಸುವ ದಿನ ದೂರವಿಲ್ಲ. ಸಾಮಾನ್ಯ ವರ್ಗದವರು ಕೂಡ ವಿಮಾನದಲ್ಲಿ ಹಾರಾಟ ಮಾಡಬೇಕೆನ್ನುವ ಕನಸು ನನಸಾಗುವ ದಿನ ಹತ್ತಿರದಲ್ಲಿಯೇ ಇದೆ ಎಂದು ಹೇಳಿದರು.
ಏನಿದು ಹಸಿರು ವಿಮಾನ ನಿಲ್ದಾಣ: ಹಾರುವ ಬೂದಿಯ ಇಟ್ಟಿಗೆಗಳನ್ನು ಬಳಸಿ ಹಸಿರು ಮೂಲಸೌಕರ್ಯ ತತ್ವದಡಿ ನಿಲ್ದಾಣವನ್ನು ನಿರ್ಮಿಸಲಾಗಿದೆ. 17 ಸಾವಿರದ 500 ಚದರಡಿ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣದ ವ್ಯಾಪ್ತಿಯಿದ್ದು ಈ ಹೊಸ ಸಂಯೋಜಿತ ನಿಲ್ದಾಣ ಕಟ್ಟಲು ತಗುಲಿದ ವೆಚ್ಚ 160 ಕೋಟಿ ರೂಪಾಯಿ. ಸುಮಾರು 700 ಜನರು ನಿಲ್ಲುವಷ್ಟು ನಿಲ್ದಾಣ ದೊಡ್ಡದಾಗಿದೆ. ಪ್ರತಿ ಗಂಟೆಗೆ 18 ಚೆಕ್ ಇನ್ ಕೌಂಟರ್ ಗಳಿವೆ. ತಡೆರಹಿತ ಬೋರ್ಡಿಂಗ್ ಪ್ರಕ್ರಿಯೆ ಸಹಾಯ ಮಾಡುತ್ತದೆ. 
2009ರಲ್ಲಿ ಅಂದಿನ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಶಂಕು ಸ್ಥಾಪನೆ ನೆರವೇರಿಸಿದ್ದರು. 7 ವರ್ಷಗಳ ನಂತರ ಇದು ಮುಕ್ತಾಯಗೊಂಡಿದೆ. 8 ಸಾವಿರದ 100 ಮೀಟರ್ ಉದ್ದದ ರನ್ ವೇಯನ್ನು ಹೊಂದಿರುವ ವಡೋದರಾ ವಿಮಾನ ನಿಲ್ದಾಣ ಏರ್ ಬಸ್ 320 ಮತ್ತು ಬೋಯಿಂಗ್ 737ಎಸ್ ನಂತಹ ಸಣ್ಣ ಮತ್ತು ಕಿರಿದಾದ ವಿಮಾನಗಳನ್ನು ನಿಭಾಯಿಸುತ್ತದೆ. ಅಲ್ಲದೆ ರಾಷ್ಟ್ಕೀಯ ವಿಮಾನಗಳಾದ ಏರ್ ಇಂಡಿಯಾ, ಖಾಸಗಿ ವಿಮಾನ ಇಂಡಿಗೋ, ಜೆಟ್ ಏರ್ ವೇಸ್ ಗಳು ಕೂಡ ಇಲ್ಲಿಂದ ಕಾರ್ಯನಿರ್ವಹಿಸುತ್ತವೆ. 
ಅಭಿವೃದ್ಧಿಗೆ ಸಂಪರ್ಕವನ್ನು ಕೇಂದ್ರೀಕರಿಸುವ ಅಗತ್ಯವಿದ್ದು, ವಡೋದರದಲ್ಲಿ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಇದು ಮುಂದಿನ ಶತಮಾನಕ್ಕೆ ಬಹಳ ಉಪಕಾರಿಯಾಗಲಿದೆ. ಭಾರತೀಯ ರೈಲ್ವೆಯ ಆಧುನೀಕರಣ ಮತ್ತು ಸಂಶೋಧನೆಗೆ ರೈಲ್ವೆ ವಿಶ್ವವಿದ್ಯಾಲಯಗಳು ಪ್ರಯೋಜನಕಾರಿಯಾಗಲಿದೆ ಎಂದು ಪ್ರಧಾನಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT