ಹೈದರಾಬಾದ್: ಕಾಮುಕನೋರ್ವ ಗರ್ಭಿಣಿ ನಾಯಿಯನ್ನು ಕೊಂದು ಅದರ ಶವದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಪೊಲೀಸರ ಅತಿಥಿಯಾಗಿರುವ ವಿಕೃತ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ನೇಪಾಳ ಮೂಲದ ಆಸ್ಲಾಂ ಖಾನ್ ಅಲಿಯಾಸ್ ಸುಭಾಶ್ ಬಂಧಿತ ಆರೋಪಿ, ಎರಡು ದಿನಗಳ ಹಿಂದೆ ತನ್ನ ಸ್ನೇಹಿತರನ್ನು ನೋಡಲು ಹೈದರಾಬಾದ್‌ಗೆ ಆಗಮಿಸಿದ್ದ.
ಈ ವೇಳೆ ಶಾಸ್ತ್ರಿ ನಗರದ ಜಹಾಂಗೀರ್ ಎಂಬುವರು ಸಾಕಿದ್ದ ನಾಯಿಯನ್ನು ಕತ್ತು ಹಿಸಕಿ ಕೊಂದ ಆರೋಪಿ ಪೊದೆಗೆ ಎಳೆದೊಯ್ದಿದ್ದಾನೆ, ನಿರ್ಮಾಣ ಹಂತದ ಕಟ್ಟಡಕ್ಕೆ ನೀರು ಹಾಕುತ್ತಿದ್ದ ಜಹಾಂಗಿರ್, ಆರೋಪಿ ನಾಯಿಯನ್ನ ಪೊದೆಗೆ ಎಳೆದು ಕೊಂಡು ಹೋಗಿದ್ದನ್ನು ನೋಡಿ ತನ್ನ ಮಕ್ಕಳಿಗೆ ವಿಷಯ ತಿಳಿಸಿದ್ದಾನೆ. ಪೊದೆಯ ಬಳಿ ಬಂದ ಜಹಾಂಗೀರ್ ಮಕ್ಕಳು, ಅಸ್ಲಾಂ ಖಾನ್ ಶತ್ತ ನಾಯಿಯ ಶವದೊಡನೆ ಅಸಹಜ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.