ಶ್ರೀನಗರ: ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕಿ ಪದ್ಮಶ್ರೀ ಪುರಸ್ಕೃತ ರಾಜ್ ಬೇಗಮ್ ಅವರು ನಿಧನರಾಗಿದ್ದಾರೆ.
89 ವರ್ಷವಾಗಿದ್ದ ರಾಜ್ ಬೇಗಮ್ ಅವರು ಚನಪೋರಾದಲ್ಲಿರುವ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಶ್ರೀನಗರದ ಮಾಗರ್ಮಾಲ್ ಬಾಗ್ ನ ಗುಲಾಂ ರಸೂಲ್ ಶೇಖ್ ಪುತ್ರಿಯಾಗಿ 1927ರಲ್ಲಿ ಜನಿಸಿದ್ದ ರಾಜ್ ಬೇಗಮ್ ಅವರಿಗೆ 2002ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.