ರಾಜ್ಯ ಸಭಾ ಸದಸ್ಯ ಮುನಬ್ಬಾರ್ ಸಲೀಮ್ 
ದೇಶ

ಬೇಹುಗಾರಿಕೆ ಪ್ರಕರಣ: ಸಮಾಜವಾದಿ ಪಕ್ಷದ ಎಂಪಿ ಆಪ್ತ ಕಾರ್ಯದರ್ಶಿ ಬಂಧನ

ಬೇಹುಗಾರಿಕೆ ಆರೋಪದಲ್ಲಿ ಸಮಾಜವಾದಿ ಪಕ್ಷದ ಸಂಸದನ ಆಪ್ತ ಕಾರ್ಯದರ್ಶಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ...

ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಸಮಾಜವಾದಿ ಪಕ್ಷದ ಸಂಸದನ ಆಪ್ತ ಕಾರ್ಯದರ್ಶಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಗೂಢಚರ್ಯೆ ಆರೋಪದ ಮೇಲೆ ನಿನ್ನೆ ಪಾಕ್ ಹೈ ಕಮಿಷನರ್ ಸಿಬ್ಬಂದಿ ಬಂಧಸಿ ಆತನನ್ನು ದೇಶದಿಂದ ಉಚ್ಚಾಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ರಾಜ್ಯ ಸಭಾ ಸದಸ್ಯ ಮುನಬ್ಬಾರ್ ಆಪ್ತ ಕಾರ್ಯದರ್ಶಿ ಪರ್ಹತ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ನಿನ್ನೆ ರಾತ್ರಿ ಪರ್ಹತ್ ನನ್ನು ಬಂಧಿಸಿರುವ ದೆಹಲಿ ಅಪರಾಧ ದಳ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಭಾಗಿಯಾಗಿರು ಶಂಕೆ ವ್ಯಕ್ತ ಪಡಿಸಿರುವ ಪೊಲೀಸರು ಅವರನ್ನೆಲ್ಲಾ ಸೆರೆ ಹಿಡಿಸಲು ಪ್ರಯತ್ನ ನಡೆಸಿದ್ದಾರೆ.

ಭಾರತದ ರಕ್ಷಣಾ ಇಲಾಖೆಯ ಮಾಹಿತಿ ಹಾಗೂ ದಾಖಲೆಗಳನ್ನು ಮತ್ತು ಗಡಿಯಲ್ಲಿ ಬಿಎಸ್‌ಎಫ್‌ ಯೋಧರ ನೇಮಕ ಕುರಿತ ಗೌಪ್ಯ ಮಾಹಿತಿಯನ್ನು ರವಾನೆ ಮಾಡಿದ ಆರೋಪ ಪಾಕ್‌ನ ಹೈ ಕಮಿಷನರ್ ಮೇಲಿದೆ. ಇದಕ್ಕೆ ಕೆಲ ಭಾರತೀಯರು ಸಹಾಯ ಮಾಡಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ನಿನ್ನೆ ಜೋಧಪುರ್‌ ಮೂಲದ ಪಾಸ್‌ಪೋರ್ಟ್ ಹಾಗೂ ವಿಸಾ ಏಜೆಂಟ್‌  ಮೆಹಮೂದ್‌ ಅಕ್ತರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ಮೊದಲ ಹಂತದ ಚುನಾವಣೆ: NDA ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಹೆಸರು ಪ್ರಸ್ತಾಪಿಸಿದ ಬಿಜೆಪಿ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ನಾಯಕತ್ವ ಬದಲಾವಣೆ ಜಟಾಪಟಿ: 5 ವರ್ಷವೂ ನಾನೇ ಸಿಎಂ ಎಂದು ಡಿಕೆಶಿ ನೋಡಿದಾಕ್ಷಣ ಸ್ವರ ಬದಲಿಸಿದ ಸಿದ್ದು, ಊಹಾಪೋಹ ಶುರು

ಕೂಡ್ಲಿಗಿ ಕಾರ್ಯಕ್ರಮದಲ್ಲಿ CM-DCM ನಡುವಿನ ವೈಮನಸ್ಸು ಬಹಿರಂಗ; ಅಕ್ಕ ಪಕ್ಕ ಕುಳಿತರೂ ಮಾತನಾಡದ ಸಿದ್ದು-ಡಿಕೆಶಿ..!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾಮೂಹಿಕ 'ನಮಾಜ್‌': ಅನುಮತಿ ಕೊಟ್ಟವರು ಯಾರು? ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ! Video

SCROLL FOR NEXT