ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ 
ದೇಶ

ಮುಸ್ಲಿಂ ಕೈದಿಗಳೇ ಜೈಲಿನಿಂದ ಪರಾರಿಯಾಗುತ್ತಾರೆ, ಹಿಂದೂ ಕೈದಿಗಳೇಕಿಲ್ಲ: ದಿಗ್ವಿಜಯ್ ಸಿಂಗ್ ವ್ಯಂಗ್ಯ

ಜೈಲಿನಲ್ಲಿ ಮುಸ್ಲಿಂ ಕೈದಿಗಳೇ ಪರಾರಿಯಾಗುತ್ತಿದ್ದು, ಹಿಂದೂ ಕೈದಿಗಳು ಮಾತ್ರ ಏಕೆ ಪರಾರಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಂಗಳವಾರ...

ವಿಜಯವಾಡ: ಜೈಲಿನಲ್ಲಿ ಮುಸ್ಲಿಂ ಕೈದಿಗಳೇ ಪರಾರಿಯಾಗುತ್ತಿದ್ದು, ಹಿಂದೂ ಕೈದಿಗಳು ಮಾತ್ರ ಏಕೆ ಪರಾರಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಂಗಳವಾರ ವ್ಯಂಗ್ಯವಾಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರ ವಿರುದ್ಧ ನಾನು ಹೋರಾಟ ಮಾಡುತ್ತೇನೆ. ಮಧ್ಯಪ್ರದೇಶದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿಮಿ ಉಗ್ರ ಸಂಘಟನೆ ಮೇಲೆ ನಿಷೇಧವನ್ನು ಹೇರಿದ್ದೆ. ನಂತರ ಉತ್ತರ ಪ್ರದೇಶದಲ್ಲಿ ರಾಜನಾಥ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು.

ಆದರೆ, ಅವರು ಎಂದಿಗೂ ಸಿಮಿ ಉಗ್ರ ಸಂಘಟನೆ ಮೇಲೆ ನಿಷೇಧವನ್ನು ಹೇರಿರಲಿಲ್ಲ. ಗಲಭೆ ಪ್ರಕರಣಗಳಲ್ಲಿ ಸಿಮಿ ಜೊತೆಗೆ ಭಜರಂಗ ದಳ ಕೂಡ ಕೈಜೋಡಿಸಿತ್ತು. ಈ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ಈ ಸಾಕ್ಷ್ಯಾಧಾರಗಳ ಮೇಲೆಯೇ ಎನ್'ಡಿಎ ಸಿಮಿ ಉಗ್ರ ಸಂಘಟನೆ ಮೇಲೆ ನಿಷೇಧವನ್ನು ಹೇರಿತ್ತು ಎಂದು ಹೇಳಿದ್ದಾರೆ.

ನನಗೆ ಸಿಮಿ ಮೇಲೆ ಆಗಲಿ ಅಥವಾ ಬಜರಂಗದಳದ ಮೇಲೆಯೇ ಆಗಲಿ ಪ್ರೀತಿಯಿಲ್ಲ. ಗಲಭೆ ಸೃಷ್ಟಿಸುವ ಹಾಗೂ ಧರ್ಮ ಹೆಸರಿನಲ್ಲಿ ರಾಜಕೀಯ ಮಾಡುವವರ ವಿರುದ್ಧ ನಾನಿದ್ದೇನೆ. ಇದರಲ್ಲಿ ಓವೈಸಿ ಕೂಡ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT