ಅಶುತೋಷ್ 
ದೇಶ

ಸಂದೀಪ್ ಕುಮಾರ್ ಸೆಕ್ಸ್ ಟೇಪ್ ಸಮರ್ಥನೆಗೆ ನೆಹರು, ಗಾಂಧಿ, ವಾಜಪೇಯಿ ಉದಾಹರಣೆ ನೀಡಿದ ಅಶುತೋಷ್

ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಟೇಪ್ ನ್ನು ಸಮರ್ಥಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್, ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಎಂದು ಹೇಳಿದ್ದಾರೆ.

ನವದೆಹಲಿ: ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಟೇಪ್ ನ್ನು ಸಮರ್ಥಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಅಶುತೋಷ್, ಪರಸ್ಪರ ಸಮ್ಮತಿಯಿಂದ ನಡೆದಿರುವ ಘಟನೆ ಎಂದು ಹೇಳಿದ್ದಾರೆ.

ಸಂದೀಪ್ ಕುಮಾರ್ ನ್ನು ಸಮರ್ಥಿಸಿಕೊಂಡಿರುವ ಅಶುತೋಷ್, ಸೆಕ್ಸ್ ಜೀವನದ ಭಾಗ ಎಂದು ಹೇಳಿದ್ದಾರೆ. ಈ ಬಗ್ಗೆ ಬ್ಲಾಗ್ ಬರೆದಿರುವ ಅಶುತೋಷ್, ಭಾರತೀಯ ಇತಿಹಾಸದಲ್ಲಿ ನಮ್ಮ ನಾಯಕರು, ಹೀರೋಗಳು ಸಾಮಾಜಿಕ ಚೌಕಟ್ಟನ್ನು ಮೀರಿ ಅವರಿಗೆ ಇಷ್ಟವಿದ್ದವರೊಂದಿಗೆ ಇದ್ದ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಿದ್ದಾರೆ.

ಜವಾಹರ್ ಲಾಲ್ ನೆಹರು ಅವರನ್ನು ಉದಾಹರಣೆಯಾಗಿ ನೀಡಿರುವ ಅಶುತೋಷ್, ನೆಹರು ಹಾಗು ಎಡ್ವಿನಾ ಮೌಂಟ್ ಬ್ಯಾಟನ್ ಅವರ ಸಂಬಂಧದ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತಿತ್ತು. ಅವರಿಬ್ಬರ ನಡುವಿನ ಪ್ರೀತಿ ನೆಹರು ಕೊನೆಯುಸಿರೆಳೆಯುವವರೆಗೂ ಇತ್ತು ಎಂದು ಹೇಳಿದ್ದಾರೆ.

ಇನ್ನು ಮಹಾತ್ಮಾ ಗಾಂಧಿ ಹಾಗು ರವೀಂದ್ರನಾಥ್ ಠಾಗೂರರ ದೂರದ ಸಂಬಂಧಿ ಸರಳಾ ಚೌಧರಿ ಅವರ ಸಂಬಂಧದ ಬಗ್ಗೆಯೂ ಮಾತನಾಡಿರುವ ಅಶುತೋಷ್, ಗಾಂಧಿ ಸರಳಾ ಅವರನ್ನು ತಮ್ಮ ಆಧ್ಯಾತ್ಮಿಕ ಪತ್ನಿ ಎಂದೇ ಗುರುತಿಸುತ್ತಿದ್ದರು. ಇದರಿಂದಾಗಿ ಕಸ್ತೂರ್ಬಾ ಗಾಂಧಿ ಅವರು ಚಿಂತಿತರಾಗಿದ್ದರು, ಅಂತಿಮವಾಗಿ ಸಿ ರಾಜಗೋಪಾಲಾಚಾರಿ ಹಾಗು ಕಾಂಗ್ರೆಸ್ ನ ಹಿರಿಯ ಮುಖಂಡರು ಮಧ್ಯ ಪ್ರವೇಶಿಸಿ ಸರಳಾ ಅವರಿಂದ ದೂರ ಉಳಿಯುವಂತೆ ಗಾಂಧಿ ಅವರನ್ನು ಒತ್ತಾಯಿಸಿದ್ದರು ಎಂದು ಅಶುತೋಷ್ ಹೇಳಿದ್ದಾರೆ.

ಇನ್ನು ಸಮಾಜವಾದಿ ನಾಯಕರಾಗಿದ್ದ ರಾಮ್ ಮನೋಹರ್ ಲೋಹಿಯಾ ಅವರು ಸಹ ವಿವಾಹವಾಗದೆ ತಮ್ಮ ಸಂಗಾತಿಯೊಂದಿಗೆ ಜೀವಿಸಿದ್ದರು. ಅವರ ಸಹೋದ್ಯೋಗಿಯಾಗಿದ್ದ ಜಾರ್ಜ್ ಫರ್ನಾಂಡೀಸ್ ಲೀಲಾ ಕಬೀರ್ ಅವರನ್ನು ವಿವಾಹವಾಗಿದ್ದರೂ ಜಯಾ ಜತೇಲಿ ಅವರೊಂದಿಗಿನ ಸ್ನೇಹಕ್ಕೆ ಅಡ್ಡಿಯಾಗಿರಲಿಲ್ಲ, ಅವರಂತೆಯೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿವಾಹವಾಗದೆ ಇದ್ದರು ತಾವು ಬ್ರಹ್ಮಚಾರಿಯಲ್ಲ ಎಂದು ಸಂಸತ್ ನಲ್ಲಿಯೇ ಹೇಳಿದ್ದರು. ಅವರು ತಮ್ಮ ಸ್ನೇಹಿತೆಯೊಂದಿಗೆ ಜೀವಿಸಿದ್ದರು ಸಮಾಜ ಅದನ್ನು ಆಕ್ಷೇಪಿಸಲಿಲ್ಲ. ಆದ್ದರಿಂದ ಸೆಕ್ಸ್ ಜೀವನದ ಭಾಗವಾಗಿದೆ, ಸಂದೀಪ್ ಕುಮಾರ್ ಅವರ ಘಟನೆಯಲ್ಲಿ ಸಮ್ಮತಿಯಿಂದಲೇ ಸೆಕ್ಸ್ ನಡೆದಿದೆ ಎಂದು ಹೇಳುವ ಮೂಲಕ ಅಶುತೋಷ್ ಆಪ್ ನ ಮಾಜಿ ಸಚಿವನನ್ನು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್, ಪರಸ್ಪರ ಆಲಿಂಗನ..!

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT