ಮನೋಹರ್ ಪರಿಕ್ಕರ್ 
ದೇಶ

ನನ್ನನ್ನು ವಜಾಗೊಳಿಸಲು ನಿತಿನ್ ಗಡ್ಕರಿಗೆ ಪರಿಕ್ಕರ್ ಸೂಚಿಸಿದ್ದರು: ಉಚ್ಛಾಟಿತ ಆರ್ ಎಸ್ ಎಸ್ ಅಧ್ಯಕ್ಷ ಸುಭಾಷ್ ವೆಲಿಂಗ್ಕರ್

ಗೋವಾ ರಾಜ್ಯಕ್ಕೆ ಬಿಜೆಪಿಯಿಂದ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಬೆನ್ನಲ್ಲೇ ನಿತಿನ್ ಗಡ್ಕರಿ ಅವರಿಗೆ ಇದ್ದ ಮೊದಲ ಕೆಲಸವೆಂದರೆ ಅದು ನನ್ನನ್ನು ವಜಾಗೊಳಿಸುವುದಾಗಿತ್ತು...

ಪಣಜಿ: ಗೋವಾ ರಾಜ್ಯಕ್ಕೆ ಬಿಜೆಪಿಯಿಂದ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಬೆನ್ನಲ್ಲೇ ನಿತಿನ್ ಗಡ್ಕರಿ ಅವರಿಗೆ ಇದ್ದ ಮೊದಲ ಕೆಲಸವೆಂದರೆ ಅದು ನನ್ನನ್ನು ವಜಾಗೊಳಿಸುವುದಾಗಿತ್ತು ಎಂದು ಸುಭಾಷ್ ವೆಲಿಂಗ್ಕರ್ ಆರೋಪಿಸಿದ್ದಾರೆ.
 
ಗೋವಾದಲ್ಲಿ ಆರ್ ಎಸ್ ಎಸ್ ಗೆ ಪರ್ಯಾಯವಾಗಿ ಪ್ರಾರಂಭಿಸಿರುವ ಸಂಘಟನೆ ತನ್ನ ಕೆಲಸವನ್ನು ಮುಂದುವರೆಸಲಿದೆ ಎಂದು ಹೇಳಿರುವ ವೆಲಿಂಗ್ಕರ್, ಮುಂಬರುವ ವಿಧಾನಸಭಾ ಚುನಾವಣೆಗೆ ನಿತಿನ್ ಗಡ್ಕರಿ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಅವರಿಗೆ ನನ್ನನ್ನು ವಜಾಗೊಳಿಸುವ ಕೆಲಸ ವಹಿಸಲಾಗಿತ್ತು ಇದಕ್ಕೆ ಮನೋಹರ್ ಪರಿಕ್ಕರ್ ಅವರ ಒತ್ತಡವೇ ಕಾರಣ ಎಂದು ವೆಲಿಂಗ್ಕರ್ ಆರೋಪಿಸಿದ್ದಾರೆ.
 
ತಮ್ಮನ್ನು ವಜಾಗೊಳಿಸಿರುವುದಕ್ಕೂ ಆರ್ ಎಸ್ ಎಸ್ ನ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ವೆಲಿಂಗ್ಕರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಶಿಕ್ಷಣ ಮಾಧ್ಯಮದ ಸಂಬಂಧ ತಮ್ಮ ನಿಲುವಿಗೆ ಬೆಂಬಲ ನೀಡಿರುವ ಶಿವಸೇನೆಗೆ ಧನ್ಯವಾದ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!