ನಿರ್ಗಮಿತ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ತಮ್ಮ ಪತ್ನಿ ರಾಧಿಕಾ ರಾಜನ್ ರೊಂದಿಗೆ ದೆಹಲಿಯ ಸೈಂಟ್ ಸ್ಟೆಫೆನ್ಸ್ ಕಾಲೇಜಿನಲ್ಲಿ ಉಪನ್ಯಾಸ ನೀಡಿ ತೆರಳುತ್ತಿರುವುದು. 
ದೇಶ

ಸರ್ಕಾರಕ್ಕೆ ಇಲ್ಲ ಎಂದು ಹೇಳುವ ಆರ್ ಬಿಐ ಸಾಮರ್ಥ್ಯವನ್ನು ರಕ್ಷಿಸಬೇಕು: ರಘುರಾಮ್ ರಾಜನ್

ದೇಶಕ್ಕೆ ಪ್ರಬಲ ಮತ್ತು ಸ್ವತಂತ್ರ ಬ್ಯಾಂಕ್ ನ ಅಗತ್ಯವಿರುವುದರಿಂದ ಸರ್ಕಾರದ ಅತ್ಯುನ್ನತ ಅಧಿಕಾರಿಗಳ...

ನವದೆಹಲಿ: ದೇಶಕ್ಕೆ ಪ್ರಬಲ ಮತ್ತು ಸ್ವತಂತ್ರ ಬ್ಯಾಂಕ್ ನ ಅಗತ್ಯವಿರುವುದರಿಂದ ಸರ್ಕಾರದ ಅತ್ಯುನ್ನತ ಅಧಿಕಾರಿಗಳ ವರ್ಗದ ಒತ್ತಡವಿಲ್ಲದೆ ಆರ್ ಬಿಐ ತನ್ನ ಸಾಮರ್ಥ್ಯವನ್ನು ರಕ್ಷಿಸಬೇಕು ಎಂದು ನಿರ್ಗಮಿತ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. 
ಅವರು ನಾಳೆ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸುವ ಮುನ್ನ ಇಂದು ದೆಹಲಿಯ ಸೈಂಟ್ ಸ್ಟೆಫನ್ಸ್ ಕಾಲೇಜಿನಲ್ಲಿ ಕೇಂದ್ರ ಬ್ಯಾಂಕಿನ ಸ್ವತಂತ್ರದ ಕುರಿತು ಉಪನ್ಯಾಸ ನೀಡಿದರು. ಸರ್ಕಾರ ರಚಿಸಿರುವ ಚೌಕಟ್ಟಿನಡಿಯಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕೆಲಸ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅವರ ಮೊದಲಿನ ಆರ್ ಬಿಐ ಗವರ್ನರ್  ಡಿ.ಸುಬ್ಬಾರಾವ್ ಅವರ ಮಾತುಗಳನ್ನು ರಾಜನ್ ನೆನಪಿಸಿಕೊಂಡರು. ರಿಸರ್ವ್ ಬ್ಯಾಂಕಿಗೆ ಕಾರ್ಯಚಟುವಟಿಕೆಗಳ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಮುಖ್ಯ ಎಂದು ಹೇಳಿದರು. ಈ ನಿಟ್ಟಿನಲ್ಲಿ ಬಜೆಟ್, ಅನುಮತಿ, ಸಕ್ರಮ ಮತ್ತು ಮೇಲ್ವಿಚಾರಣೆ ಮೊದಲಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಆರ್ ಬಿಐಗೆ ಇರಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!