ದೇಶ

ಪಾಕಿಸ್ತಾನದಿಂದ ಉತ್ತರ ಕೊರಿಯಾಗೆ ಗುಟ್ಟಾಗಿ ಪರಮಾಣು ಸಾಮಾಗ್ರಿ ಮಾರಾಟ; ಭಾರತಕ್ಕೆ ಅಮೆರಿಕಾ ಮಾಹಿತಿ

Shilpa D

ನವದೆಹಲಿ: ಪಾಕಿಸ್ತಾನ ಗುಟ್ಟಾಗಿ ಉತ್ತರ ಕೊರಿಯಾಗೆ ಪರಮಾಣು ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದೆ ಎಂದು ಭಾರತದ 'ರಾ' ಸಂಸ್ಥೆಗೆ ಅಮೆರಿಕಾದ ಕೇಂದ್ರೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಸಮುದ್ರ ಮಾರ್ಗದ ಮೂವಕ ಪಾಕಿಸ್ತಾನ ಉತ್ತರ ಕೊರಿಯಾಗೆ ಪರಮಾಣು ವಸ್ತುಗಳನ್ನು ಸಾಗಾಟ ಮಾಡುತ್ತಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನ ಅಣು ಶಕ್ತಿ ಆಯೋಗವು ಉತ್ತರ ಕೊರಿಯಾಗೆ ಮೊನೆಲ್ ಮತ್ತು ಎನ್ ಕೋಲ್ ಎಂಬ ಪರಮಾಣು ಪದಾರ್ಥಗಳನ್ನು ಸಾಗಿಸಿ ವಿಶ್ವ ಸಂಸ್ಥೆಯ ಪ್ಯೊಂಗ್ ಯಾಂಗ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ.

ಚೀನಾದ ಬೀಜಿಂಗ್ ನ ಸನ್ ಟೆಕ್ ಟೆಕ್ನಾಲಜಿ ಕಂಪನಿಯಿಂದ ಪರಮಾಣು ಸಾಮಾಗ್ರಿ ಇಸ್ಲಾಮಾಬಾದ್ ಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಬೀಜಿಂಗ್ ನಿಂದ ರಪ್ತಾಗುವ ಈ ಪರಮಾಣು ವಸ್ತುಗಳು ಪಾಕಿಸ್ತಾನ ಸರ್ಕಾರದ ಆದೇಶದ ಮೇರೆಗೆ ಕಾರ್ಗೋ ಶಿಪ್ ನಲ್ಲಿ ಉತ್ತರ ಕೊರಿಯಾಗೆ ಸಾಗಣೆಯಾಗುತ್ತಿದೆ ಎಂದು ಅದು ತಿಳಿಸಿದೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರು ಮಾಡಲು ಪಾಕಿಸ್ತಾನ ಉತ್ತರ ಕೊರಿಯಾಗೆ ಉಪಕರಣಗಳನ್ನು ನೀಡುತ್ತಿದೆ ಎಂಬ ಮತ್ತೊಂದು ಆಘಾತಕಾರಿ ಅಂಶವನ್ನು ಅಮೆರಿಕಾ ಕೇಂದ್ರಿಯ ಗುಪ್ತಚರ ಇಲಾಖೆ ಭಾರತದ  ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಗೆ ಎಚ್ಚರಿಕೆ ನೀಡಿದೆ.

SCROLL FOR NEXT