ದೇಶ

ಇನ್ಮುಂದೆ ವಾಹನ ಚಾಲನೆಗೆ ಡಿಎಲ್, ಆರ್‌ಸಿ ಹಾರ್ಡ್ ಕಾಪಿ ಬೇಕಿಲ್ಲ!

Vishwanath S

ನವದೆಹಲಿ: ವಾಹನ ಸವಾರರಿಗೆ ಇದೊಂದು ಸಿಹಿ ಸುದ್ದಿ. ಇನ್ನು ಮುಂದೆ ಚಾಲನಾ ಪರವಾನಗಿ ಹಾಗೂ ವಾಹನದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಜತೆಯಲ್ಲಿ ಇಟ್ಟುಕೊಳ್ಳದೇ ಡ್ರೈವ್ ಮಾಡಬಹುದು.

ಚಾಲನಾ ಪರವಾನಗಿ ಹಾಗೂ ನೋಂದಣಿ ಪ್ರಮಾಣಪತ್ರ ಡಿಜಿಲಾಕರ್ ನಲ್ಲಿ ಭದ್ರವಾಗಿದ್ದರೆ ಸಾಕು. ಅಗಕ್ಯ ಬಿದ್ದಾಗ ಪೊಲೀಸರು ಸಾರಿಗೆ ಅಧಿಕಾರಿಗಳು ರಾಷ್ಟ್ರೀಯ ಡಿಜಿಟಲ್ ಲಾಕರ್ ವ್ಯವಸ್ಥೆಯಡಿ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ.

ಸಾರಿಗೆ ಹಾಗೂ ಆದಾಯ ತೆರಿಗೆ ಸಚಿವಾಲಯ ಬುಧವಾರ ಈ ವ್ಯವಸ್ಥೆಗೆ ಚಾಲನೆ ನೀಡಲಿದೆ. ಈ ಡಿಜಿಲಾಕರ್ ವ್ಯವಸ್ಥೆಯಿಂದ ಎಲ್ಲ ಪ್ರಮುಖ ದಾಖಲೆಗಳು ಒಂದೆಡೆ ಲಭ್ಯವಾಗಲಿದೆ.

ಆಧಾರ್ ಕಾರ್ಡ್ ಜತೆಗೆ ಮೊಬೈಲ್ ಫೋನ್ ನಂಬರ್ ಜೋಡಣೆ ಆಗಿದ್ದರೆ ಡಿಜಿಲಾಕರ್ ಸೇವೆ ಪಡೆಯಲು ಖಾತೆ ತೆರೆಯಬಹುದು. ಈ ಸೇವೆ ಆರಂಭಗೊಂಡರೆ ಬಳಕೆದಾರರ ಮೊಬೈಲ್ ಫೋನ್ ನಲ್ಲೇ ಅಧಿಕಾರಿಗಳು, ವಾಹನ ಹಾಗೂ ಸವಾರರ ಡಿಎಲ್, ಆರ್ ಸಿ ಪರಿಶೀಲಿಸಬಹುದು.

SCROLL FOR NEXT