ಕಪಿಲ್ ಶರ್ಮಾ 
ದೇಶ

ಕಪಿಲ್ ಶರ್ಮಾರಿಂದ ಲಂಚ ಆರೋಪ: ತಪಿತಸ್ಥರ ವಿರುದ್ಧ ಕ್ರಮಕ್ಕೆ ಬಿಎಂಸಿ ಭರವಸೆ

ಖ್ಯಾತ ಹಾಸ್ಯ ನಟ, ಟಿವಿ ನಿರೂಪಕ ಕಪಿಲ್ ಶರ್ಮಾ ಅವರ ಆಕ್ರೋಶಿತ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಸರ್ಕಾರಿ...

ಮುಂಬೈ: ಖ್ಯಾತ ಹಾಸ್ಯ ನಟ, ಟಿವಿ ನಿರೂಪಕ ಕಪಿಲ್ ಶರ್ಮಾ ಅವರ ಆಕ್ರೋಶಿತ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ), ಸರ್ಕಾರಿ ಅಧಿಕಾರಿ ಲಂಚ ಕೇಳಿದ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ.
ಕಪಿಲ್ ಶರ್ಮಾ ಅವರು ಮುಂಬೈ ಯಲ್ಲಿರುವ ತಮ್ಮ ಕಛೇರಿ ನಿರ್ಮಾಣಕ್ಕಾಗಿ ಬಿಎಮ್ ಸಿ ತಮ್ಮಿಂದ 5 ಲಕ್ಷ ಲಂಚ ಕೇಳಿದ್ದಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ದೇಶವ್ಯಾಪೀ ಬೆಂಬಲ ವ್ಯಕ್ತವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ 'ಇದೇನಾ ನಿಮ್ಮ ಅಚ್ಚೇ ದಿನ್' ಎಂದು ಹಾಸ್ಯ ನಟ ಪ್ರಶ್ನಿಸಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಬಿಎಂಸಿಯ ಜಾಗೃತ ದಳದ ಮುಖ್ಯಸ್ಥ ಮನೋಹರ್ ಪವಾರ್ ಅವರು, ಕಪಿಲ್ ಅವರ ಆರೋಪ ಗಂಭೀರವಾಗಿದೆ. ಆದರೆ ಅವರು ಇದುವರೆಗೂ ಅಧಿಕೃತವಾಗಿ ದೂರು ನೀಡಿಲ್ಲ. ಒಂದು ವೇಳೆ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಅಲ್ಲದೆ ಲಂಚಕ್ಕೆ ಬೇಡಿಯಿಟ್ಟ ಅಧಿಕಾರಿಯ ಬಗ್ಗೆ ವಿವರ ನೀಡುವಂತೆ ಕಪಿಲ್ ಅವರಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರು ಕಪಿಲ್ ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ಇಲಾಖೆಗೆ ತಿಳಿಸುವಂತೆಯೂ ಹಾಗೂ ಇದರ ಕುರಿತು ತಕ್ಷಣದ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಕಪಿಲ್ ಅವರ ಕಟ್ಟಡ ಅಕ್ರಮವಾಗಿದ್ದಾಗಿಯೂ ಈ ಬಗ್ಗೆ ಕಪಿಲ್ ಗೆ ಈಗಾಗಲೇ ನೋಟೀಸ್ ನೀಡಿದ್ದಾಗಿಯೂ ಬಿಎಂಸಿ ಹೇಳಿದೆ. ಕಪಿಲ್ ನೆರೆಯವರೂ ಕೂಡಾ ಬಿಎಮ್ ಸಿ ಹೇಳಿಕೆಯನ್ನು ಸಮರ್ಥಿಸಿದ್ದು ಕಪಿಲ್ ಕಛೇರಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಪತ್ರವೇ ಇಲ್ಲ ೆಂದು ಹೇಳಿದ್ದಾರೆ.
ಕಟ್ಟಣ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಬಿಎಮ್ ಸಿ ಕಪಿಲ್ ಗೆ ನೀಡಿದ ನೋಟಿಸ್ ಈಗ ಮಾಧ್ಯಮಗಳ ಕೈಗೆ ಸಿಕ್ಕಿದ್ದು ಇದರಲ್ಲಿ ತಪ್ಪು ಯಾರದ್ದು ಎಂದು ಇಲಾಖೆಯೇ ನಿರ್ಧರಿಸಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ