ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿಯವರು ಎಂದಿಗೂ ರೈತರ ಜತೆ ಸೆಲ್ಫಿ ತೆಗೆದುಕೊಂಡದ್ದಿಲ್ಲ: ರಾಹುಲ್ ಗಾಂಧಿ

ಎಂದಿನಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...

ಉತ್ತರ ಪ್ರದೇಶದಲ್ಲಿ ಪಾದಯಾತ್ರೆ ವೇಳೆ ರಾಹುಲ್ ಗಾಂಧಿಗೆ ಜನರಿಂದ ಸನ್ಮಾನ
Sumana Upadhyaya
Updated On : 12 Sept 2016, 3:03 am
ಅಜಮ್ ಗರ್/ ಗಾಜಿಪುರ(ಉ.ಪ್ರ): ಎಂದಿನಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ತಮ್ಮ ಆರು ದಿನಗಳ ದಿಯೊರಿಯಾದಿಂದ ದೆಹಲಿಗೆ ರೈತರ ಯಾತ್ರೆಯ ಮೊದಲ ಸುತ್ತಿನ ಪಾದಯಾತ್ರೆಯನ್ನು ಮುಗಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೋದಿಯವರು ಸೆಲ್ಫಿ ತೆಗೆದುಕೊಳ್ಳುತ್ತಾರೆ, ಮೋಜು ಮಾಡುತ್ತಾರೆ, ಸಾಮಾನ್ಯ ಜನತೆ, ರೈತರು ಹಗ್ಗ ಹಾಕಿಕೊಳ್ಳಬೇಕಷ್ಟೆ, ಒಬ್ಬ ರೈತನ ಜತೆ ಪ್ರಧಾನಿಗಳು ಸೆಲ್ಫಿ ತೆಗೆದುಕೊಂಡದ್ದನ್ನು ನೋಡಿಲ್ಲ ಎಂದು ಹರಿಹಾಯ್ದರು. ನಿನ್ನೆ ಕೂಡ ರಾಹುಲ್ ಗಾಂಧಿಯವರೊಂದಿಗೆ ಮಂಚ್ ಪೆ ಚರ್ಚಾ ಕಾರ್ಯಕ್ರಮದ ವೇಳೆ ಮಂಚಗಳನ್ನು ಜನರು ಎತ್ತಿಕೊಂಡು ಹೋದ ಪ್ರಕರಣ ನಡೆಯಿತು.
ನಿನ್ನೆ ಅವರು ಅಜಮ್ ಗರ್ ಜಿಲ್ಲೆಯ ಸತಿಯೊನ್ ನಲ್ಲಿ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ ಮುಸಲ್ಮಾನರು ಹೆಚ್ಚಾಗಿರುವ ಮತ್ತು ನೇಯ್ಗೆಗಾರರು ಹೆಚ್ಚಿರುವ ಮುಬಾರಕ್ ಪುರದಲ್ಲಿ ಸಭೆಗಳನ್ನು ನಡೆಸಿದರು. 

Advertisement

Advertisement

ಅವರ ನಿನ್ನೆಯ ಭಾಷಣದಲ್ಲಿ ಮುಖ್ಯವಾಗಿ ಪ್ರಧಾನಿಯವರ ವಿರುದ್ಧ ಹರಿಹಾಯ್ದರು. ಅಲ್ಲಲ್ಲಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ರ ವಿರುದ್ಧವೂ ಆರೋಪ ಮಾಡಿದರು.
ಆನೆ ಎಲ್ಲವನ್ನೂ ಮುಗಿಸುತ್ತದೆ, ಸೈಕಲ್ ನ್ನು ಅಧಿಕಾರಕ್ಕೆ ತಂದಿರಿ, ಆದರೆ ಅದೀಗ ಪಂಕ್ಚರ್ ಆಗಿದೆ. ಕಾಂಗ್ರೆಸ್ ನ್ನು ಅಧಿಕಾರಕ್ಕೆ ತನ್ನಿ, ಆ ಬಳಿಕ ನಾವೇನು ಬದಲಾವಣೆ ತರುತ್ತೇವೆ ಎಂದು ನೋಡಿ ಎಂದರು.
ಅಮೆರಿಕಕ್ಕೆ ಹೋಗಿ ಮೋದಿ ಬರಾಕ್ ಒಬಾಮಾ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ, ಭಾರತಕ್ಕೆ ಹಿಂತಿರುಗದೆ ಚೀನಾ, ಜಪಾನ್ ಗೆ ಹೋಗುತ್ತಾರೆ. ಆದರೆ ರೈತರಿಗೆ ಉಪಯೋಗವಾಗುವ ಕೆಲಸ ಮಾಡುವುದೇ ಇಲ್ಲ, ಬಿಜೆಪಿ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ಇಬ್ಭಾಗ ಮಾಡಿದರೆ, ಕಾಂಗ್ರೆಸ್ ಜನರನ್ನು ಒಗ್ಗೂಡಿಸುತ್ತದೆ, ಅದು ನಮ್ಮ ರಕ್ತದಲ್ಲಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments