ದೇಶ

ರಾಜ ಮಹಾಬಲಿಗೆ ಅವಮಾನ: ಅಮಿತ್ ಶಾ ಕ್ಷಮೆಯಾಚಿಸುವಂತೆ ಕೇರಳ ಸಿಎಂ ಆಗ್ರಹ

Shilpa D

ತಿರುವನಂತಪುರ: ಓಣಂ ಸಂಭ್ರಮಾಚರಣೆ ವೇಳೆ ಮಲಯಾಳಿ ಜನರನ್ನು ಅವಮಾನಗೊಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕ್ಷಮಾಪಣೆ ಕೋರಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.

ಓಣಂ ಹಬ್ಬಕ್ಕೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶುಭ ಕೋರಿರುವ ಅಮಿತ್ ಶಾ, " ಹ್ಯಾಪಿ ವಾಮನ ಜಯಂತಿ" ಎಂದು ಪೋಸ್ಟ್ ಹಾಕಿರುವುದು ಮಲಯಾಳಿಗರನ್ನು ಕೆರಳಿಸಿದೆ.

ಶಾ ಹಾಕಿರುವ ಪೋಸ್ಟ್ ನಲ್ಲಿ ವಿಷ್ಣು ತನ್ನ 5ನೇ ಅವತಾರವಾದ ವಾಮನನ ರೂಪದಲ್ಲಿದ್ದು, ಕೇರಳ ಪ್ರಾಂತ್ಯದ ಮಲಯಾಳಿ ದೊರೆ ಮಹಾಬಲಿ ತಲೆಯ ಮೇಲೆ ಕಾಲಿಟ್ಟಿರುವುದು ಮಲಯಾಳಿಗರು ಕೆರಳುವಂತೆ ಮಾಡಿದೆ.

ಅಮಿತ್ ಶಾ ಹಾಕಿರುವ ಈ ಪೋಸ್ಟ್ ನಿಂದ ರಾಷ್ಟ್ರೀಯ ಹಬ್ಬ ಓಣಂ ಮಲಯಾಳಿಗರಿಗೆ ಪವಿತ್ರ ವಾಗಿದೆ, ಈ ವೇಳೆ ಮಲಯಾಳಿಗರಿಗೆ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅಮಿತ್ ಶಾ ಮಲಯಾಳಿ ಜನತೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.

SCROLL FOR NEXT