ದೇಶ

2050 ರ ವೇಳೆಗೆ ಭಾರತದಲ್ಲಿ ಸಂಪೂರ್ಣ ನಗರೀಕರಣ: ವೆಂಕಯ್ಯ ನಾಯ್ಡು

Srinivas Rao BV

ವಿಶಾಖಪಟ್ಟಣಂ: 2050 ರ ವೇಳೆ ಭಾರತದಲ್ಲಿ ಸಂಪೂರ್ಣ ನಗರೀಕರಣವಾಗಲಿದ್ದು ಗ್ರಾಮೀಣ ಎಂಬ ವರ್ಗೀಕರಣದಿಂದ ಸಂಪೂರ್ಣ ಮುಕ್ತವಾಗಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಭಾರತದ ನಗರ ಪ್ರದೇಶಗಳ ಜನಸಂಖ್ಯೆ ವೇಗಗತಿಯಲ್ಲಿ ಬೆಳೆಯುತ್ತಿದ್ದು ಮುಂದಿನ 15 ವರ್ಷಗಳಲ್ಲಿ ಈಗಿರುವ 377 ಮಿಲಿಯನ್ ಗಿಂತ ಎರಡುಪಟ್ಟು ಹೆಚ್ಚಾಗಲಿದೆ. ವೇಗಗತಿಯ ನಗರೀಕರಣ ನೀತಿಯನ್ನು ರೂಪಿಸುವವರಿಗೆ ಸವಾಲಿನ ಸಂಗತಿಯಾಗಿದ್ದು, ಸಾಮರ್ಥ್ಯವನ್ನು ಪ್ರದರ್ಶಿಸಲು ಒದಗಿರುವ ಅತ್ಯುತ್ತಮ ಅವಕಾಶವೂ ಹೌದು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ವಿಶಾಖಪಟ್ಟಣಂ ನಲ್ಲಿ ನಡೆಯಯುತ್ತಿರುವ ಬ್ರಿಕ್ಸ್ ಅರ್ಬನೈಸೇಷನ್ ಫೋರಂ ನಲ್ಲಿ ಭಾಗವಹಿಸಿ ಮಾತನಾಡಿರುವ ವೆಂಕಯ್ಯ ನಾಯ್ಡು, 2050 ರ ವೇಳೆಗೆ ಭಾರತದ ಬಹುತೇಕ ಪ್ರದೇಶಗಳು ನಗರೀಕರಣವಾಗಲಿದ್ದು ಗ್ರಾಮೀಣ ಭಾರತ ಎಂಬ ವರ್ಗಿಕರಣದಿಂದ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.  
ವೇಗಗತಿಯಲ್ಲಿ ನಡೆಯುತ್ತಿರುವ ನಗರೀಕರಣದಿಂದಾಗಿ ಎದುರಾಗಿರುವ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಹಿಂದಿನಿಂದಲೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ ನಾಗರಾಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗಿಲ್ಲ ಪರಿಣಾಮವಾಗಿ ವ್ಯವಸ್ಥಿತ ನಗರ ವಿಸ್ತರಣೆಯಲ್ಲಿ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

SCROLL FOR NEXT