ದೇಶ

ಆರ್‍‍ಜೆಡಿ ಮಾಜಿ ಸಂಸದ ಶಹಾಬುದ್ದೀನ್ ಜಾಮೀನು ರದ್ದು ಕೋರಿ ಸುಪ್ರೀಂಗೆ ಮನವಿ

Lingaraj Badiger
ಪಾಟ್ನಾ: ವಿವಾದಿತ ಆರ್ ಜೆಡಿ ಪ್ರಭಾವಿ ನಾಯಕ ಮೊಹಮ್ಮದ್ ಶಹಾಬುದ್ದೀನ್ ಜಾಮೀನು ರದ್ದು ಕೋರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಶುಕ್ರವಾರ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಿದ್ದಾರೆ.
ಸಿವಾನ್ ಮೂಲದ ಚಂದ್ರಕೇಶ್ವರ್ ಪ್ರಸಾದ್ ಎಂಬುವವರು ಸಹ ಆರ್ ಜೆಡಿ ಮಾಜಿ ಸಂಸದ ಶಹಾಬುದ್ದೀನ್ ಗೆ ಜಾಮೀನು ಮಂಜೂರು ಮಾಡಿದ್ದ ಪಾಟ್ನಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಶಹಾಬುದ್ದೀನ್ ಅವರು ಪ್ರಸಾದ್ ಅವರ ಮೂವರು ಮಕ್ಕಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಅಗತ್ಯ ಬಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆಯೂ ಕೋರ್ಟ್ ಮನವಿ ಮಾಡುವುದಾಗಿ ಪ್ರಸಾದ್ ಅವರು ತಿಳಿಸಿದ್ದಾರೆ.
ರಾಜ್ ದಿಯೊ ರಂಜನ್ ಕೊಲೆ ಪ್ರಕರಣ ಹಾಗೂ ಸಿವಾನ್‍  ಎಂಬಲ್ಲಿ ನಡೆದ ಸಹೋದರರ ಹತ್ಯೆ ಪ್ರಕರಣದಲ್ಲಿನ ಸಾಕ್ಷಿದಾರರನ್ನು ಹತ್ಯೆಗೈದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶಹಾಬುದ್ದೀನ್ 11 ವರ್ಷಗಳ ನಂತರ ಕಳೆದ ಶನಿವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 
ಶಹಾಬುದ್ದೀನ್‌ ಬಿಡುಗಡೆಗೆ ಸಂಬಂಧಿಸಿದಂತೆ ನಿತಿಶ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಟ್ವೀಟರ್‌ ನಂತಹ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. 40 ಕೇಸ್‌ ಹೊಂದಿರುವ ವ್ಯಕ್ತಿ ಬಿಡುಗಡೆಯಾಗಿದ್ದು ,ಲಾಲು-ನಿತಿಶ್‌ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಲಾಗಿತ್ತು.
SCROLL FOR NEXT