ದೇಶ

ಚಂದ್ರೋದಯ ಮಂದಿರಕ್ಕೆ ಬುರ್ಜ್ ಖಲೀಫಾಗಿಂತ ಆಳವಾದ ಅಡಿಪಾಯ!

Srinivasamurthy VN

ಲಖನೌ: ಜಗತ್ತಿನಲ್ಲೇ ಅತೀ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿರುವ ಬುರ್ಜ್ ಖಲೀಫಾಗಿಂತ ಆಳವಾದ ಅಡಿಪಾಯ ಹೊಂದಿದ ಕಟ್ಟಡ ಭಾರತದಲ್ಲಿ ಶೀಘ್ರದಲ್ಲೇ ತಲೆ ಎತ್ತಲಿದ್ದು, ಉತ್ತರ ಪ್ರದೇಶದಲ್ಲಿ ಅತೀ ಎತ್ತರದ ಚಂದ್ರೋದಯ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅತೀ ಎತ್ತರದ ಮಂದಿರ ನಿರ್ಮಾಣಕ್ಕೆ ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಈ ಅತಿ ಎತ್ತರದ ಚಂದ್ರೋದಯ ಮಂದಿರ ನಿರ್ಮಾಣ ಮಾಡಲಿದ್ದು, ಉತ್ತರ ಪ್ರದೇಶದ ಬೃಂದಾವನದಲ್ಲಿ ಈ ಅತೀ ಎತ್ತರದ ಮಂದಿರ ನಿರ್ಮಾಣವಾಗುತ್ತಿದೆ. ದೇಗುಲದ ಗೋಪುರ 700 ಅಡಿ ಎತ್ತರವಿರಲಿದ್ದು, ದುಬೈನ ಅತಿ ಎತ್ತರದ ಕಟ್ಟಡ ಬುರ್ಜ್  ಖಲೀಫಾಗಿಂತ 5 ಅಡಿ ಹೆಚ್ಚು ಆಳದ ಅಡಿಪಾಯ ಈ ಮಂದಿರಕ್ಕಿರಲಿದೆ. ನಿರ್ಮಾಣದ ಬಳಿಕ ಜಗತ್ತಿನಲ್ಲಿಯೇ ಅತಿ ಎತ್ತರದ ದೇವಾಲಯ ಎಂಬ ಖ್ಯಾತಿಗೆ ಚಂದ್ರೋದಯ ಮಂದಿರ  ಪಾತ್ರವಾಗಲಿದೆ.

ಮೂಲಗಳ ಪ್ರಕಾರ ಬುರ್ಜ್ ಖಲೀಫಾ ಕಟ್ಟಡಕ್ಕೆ 50 ಮೀಟರ್ ಆಳದ ಅಡಿಪಾಯ ಹಾಕಲಾಗಿದ್ದು, ಪ್ರಸ್ತುತ ನಿರ್ಮಾಣವಾಗುತ್ತಿರುವ ಚಂದ್ರೋದಯ ಮಂದಿರಕ್ಕೆ 55 ಮೀಟರ್ ಆಳದ ಅಡಿಪಾಯ  ಹಾಕಲಾಗುತ್ತಿದೆ. ಈ ವಿಶೇಷ ಅಡಿಪಾಯದಲ್ಲಿ 511 ಅಂಕಣಗಳಿದ್ದು, ಅಡಿಪಾಯದಲ್ಲಿನ 140 ಅಂಕಣಗಳ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಅಂಕಣಗಳ ನಿರ್ಮಾಣ ಕಾರ್ಯ ಭರದಿಂದ  ಸಾಗಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಇಸ್ಕಾನ್‌ ಆಡಳಿತ ಮಂಡಳಿ ತಿಳಿಸಿದೆ.

ಇನ್ನು ಈ ವಿಶಿಷ್ಟ ಮಂದಿರದಲ್ಲಿ 700 ಅಡಿ ಎತ್ತರದ ಗೋಪುರವಿರಲಿದ್ದು, ಇದೇ ಈ ಮಂದಿರದ ಪ್ರಮುಖ ವಿಶೇಷವಾಗಿದೆ. ಮಂದಿರದ ಗೋಪುರದ ಎತ್ತರ ದೆಹಲಿಯ ಐತಿಹಾಸಿಕ ಕುತುಬ್  ಮಿನಾರ್‌ಗಿಂತ 3 ಪಟ್ಟು ಹೆಚ್ಚು ಎತ್ತರವಿರಲಿದೆಯಂತೆ. ದೇವಾಲಯದ ಸಂಕೀರ್ಣದಲ್ಲಿ ಪ್ರತಿ ಕೋನದ ಕೊನೆಗೆ 4 ಮಂದಿರಗಳನ್ನು ನಿರ್ಮಿಸಲಾಗುತ್ತಿದ್ದು, ಕೃಷ್ಣ-ರಾಧಾ, ಕೃಷ್ಣ-ಬಲರಾಮ,  ಚೈತನ್ಯ ಮಹಾಪ್ರಭು ಮತ್ತು ಸ್ವಾಮಿ ಪ್ರಭುಪಾದರ ಮಂದಿರಗಳು ನಿರ್ಮಾಣವಾಗಲಿವೆ. 72.5 ಮೀ. ಎತ್ತರ ಈ ಗೋಪುರದ ಕಾಮಗಾರಿ 2022ರ ವೇಳೆಗೆ ಬೃಹತ್ ಕಾಮಗಾರಿ ಪೂರ್ಣಗೊಳ್ಳುವ  ನಿರೀಕ್ಷೆಯಿದೆ.

SCROLL FOR NEXT