ದೇಶ

ಲಿಂಗ ಪತ್ತೆ ಪರೀಕ್ಷೆಯ ಮಾಹಿತಿ ತಡೆಹಿಡಿಯಲಿರುವ ಮೈಕ್ರೋಸಾಫ್ಟ್, ಗೂಗಲ್ ಮತ್ತು ಯಾಹೂ

Sumana Upadhyaya
ನವದೆಹಲಿ: ಮೂರು ಪ್ರಮುಖ ಸರ್ಚ್ ಎಂಜಿನ್ ಗಳಾದ ಮೈಕ್ರೋಸಾಫ್ಟ್, ಗೂಗಲ್ ಮತ್ತು ಯಾಹೂ ಲಿಂಗ ಪತ್ತೆ ಮಾಡುವ ಪರೀಕ್ಷೆಗಳನ್ನು ವಾಣಿಜ್ಯವಾಗಿ ಪ್ರಚಾರ ಮಾಡುವ ಜಾಹೀರಾತುಗಳನ್ನು ತಡೆಹಿಡಿಯಲು ಒಪ್ಪಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಪ್ರಸವ ಪೂರ್ವ ಲಿಂಗ ಪತ್ತೆ ಪರೀಕ್ಷೆ ನಿಷೇಧಿಸುವ ನಿಬಂಧನೆಗಳ ಅನುಸರಣೆಗೆ ಅಂತಹ ಪರೀಕ್ಷೆ ಬಗ್ಗೆ ಮಾಹಿತಿ ನೀಡುವ ಮಾಹಿತಿಗಳನ್ನು ತಡೆಹಿಡಿಯಲಾಗುತ್ತದೆ ಮತ್ತು ಆ ಪರೀಕ್ಷೆ ಬಗ್ಗೆ ಮಾಹಿತಿ ಒದಗಿಸುವ ಶಬ್ದಗಳನ್ನು ತೆಗೆದುಹಾಕಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಲಿಂಗ ಪತ್ತೆ ಪರೀಕ್ಷೆ ಬಗ್ಗೆ ಮಾಹಿತಿ ಸಿಗುವ ಕೆಲವು ಶಬ್ದಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಅವುಗಳು ಇನ್ನು ವೆಬ್ ಸೈಟ್ ನಲ್ಲಿ ಸಿಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
SCROLL FOR NEXT