ಚಿನ್ನದ ಗಟ್ಟಿ 
ದೇಶ

ದೆಹಲಿಯಲ್ಲಿ ಕಳ್ಳಸಾಗಣೆ ಜಾಲ ಪತ್ತೆ: 2000 ಕೋಟಿ ಮೊತ್ತದ 7000 ಕೆಜಿ ಚಿನ್ನದ ಗಟ್ಟಿ ವಶ

ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಅತೀ ದೊಡ್ಡ ಚಿನ್ನದ ಕಳ್ಳಸಾಗಣೆಯನ್ನು ಪತ್ತೆ ಹಚ್ಚಲಾಗಿದ್ದು ಸರಿ ಸುಮಾರು 2 ಸಾವಿರ ಕೋಟಿ ಬೆಲೆ ಬಾಳುವ 7 ಸಾವಿರ ಕೆಜಿ...

ನವದೆಹಲಿ: ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಅತೀ ದೊಡ್ಡ ಚಿನ್ನದ ಕಳ್ಳಸಾಗಣೆಯನ್ನು ಪತ್ತೆ ಹಚ್ಚಲಾಗಿದ್ದು ಸರಿ ಸುಮಾರು 2 ಸಾವಿರ ಕೋಟಿ ಬೆಲೆ ಬಾಳುವ 7 ಸಾವಿರ ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ವಶಪಡಿಸಿಕೊಂಡಿದೆ.

7 ಸಾವಿರ ಕೆಜಿ ಚಿನ್ನವನ್ನು ಮ್ಯಾನ್ಮಾರ್ ನಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುವಾಗ ಡಿಆರ್‌ಐ ಖದೀಮರನ್ನು ಸೆರೆಹಿಡಿದ್ದು ಅವರಿಂದ ಇದರ ಮೊತ್ತ ಸುಮಾರು 2 ಸಾವಿರ ಕೋಟಿ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಕಳ್ಳಸಾಗಣೆಯಾಗಿದ್ದ 7 ಸಾವಿರ ಕೆಜಿ ಬಂಗಾರವನ್ನು ಡಿಆರ್‌ಐ ಜಪ್ತಿ ಮಾಡಿದೆ. ಈ ಸಂಬಂಧ ಗುವಾಹಟಿ ಮೂಲದ ವ್ಯಾಪಾರಿ ಹಾಗೂ ದೆಹಲಿ ಮೂಲದ ಆತನ ಸಹಚರನನ್ನು ಬಂಧಿಸಲಾಗಿದೆ. ಇವರಿಬ್ಬರೂ 617 ಸಲ ಚಿನ್ನವನ್ನು ಮ್ಯಾನ್ಮಾರ್ ನಿಂದ ಭಾರತಕ್ಕೆ ಕಳ್ಳ ಸಾಗಣೆ ಮಾಡಿರುವುದು ಪತ್ತೆಯಾಗಿದೆ.

ಸೆ.2ರಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ದೆಹಲಿ ಘಟಕದ ಅಧಿಕಾರಿಗಳು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಕೆಜಿ 24 ಕ್ಯಾರಟ್ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರ. ಇದರ ಮಾರುಕಟ್ಟೆ ಮೌಲ್ಯ 3.1 ಕೋಟಿ ರುಪಾಯಿಗಳಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!