ಹೈದರಾಬಾದ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕರು ಕಿಂಗ್ ಫಿಶರ್ ಏರ್ ಲೈನ್ಸ್ ಲಿಮಿಟೆಡ್ ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಎ.ರಘುನಾಥನ್ ಗೆ ಹೈದರಾಬಾದ್ ನ ಸ್ಥಳೀಯ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ವಿಜಯ್ ಮಲ್ಯ ವಿರುದ್ಧ ಕೂಡ ಕೇಸು ದಾಖಲಿಸಿದ್ದರು.
ಮೂರನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೃಷ್ಣ ರಾವ್, ಅಪರಾಧಿಗೆ 20 ಸಾವಿರ ರೂಪಾಯಿ ದಂಡ ಕೂಡ ವಿಧಿಸಿದ್ದಾರೆ.
ನ್ಯಾಯಾಲಯ ಏಪ್ರಿಲ್ 20ರಂದು ಕಿಂಗ್ ಫಿಶರ್ ಏರ್ ಲೈನ್ಸ್, ವಿಜಯ್ ಮಲ್ಯ ಮತ್ತು ರಘುನಾಥನ್ ಅವರನ್ನು ತಲಾ 50 ಲಕ್ಷ ರೂಪಾಯಿಗಳ ಎರಡು ಚೆಕ್ ಬೌನ್ಸ್ ಕೇಸಿಗೆ ಸಂಬಂಧಪಟ್ಟಂತೆ ಅಪರಾಧಿಗಳೆಂದು ಸಾಬೀತುಪಡಿಸಿತ್ತು.