ಚಂಡಿಗಡ: ತಾವು ಸ್ಫಾಪಿಸಿರುವ ಆವಾಜ್ ಎ ಪಂಜಾಬ್ ಅನ್ನು ರಾಜಕೀಯ ಪಕ್ಷವನ್ನಾಗಿಸುವುದಿಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಹೊಸ ಪಕ್ಷ ರಚಿಸಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಫರ್ಧಿಸಲು ಸಾಕಷ್ಟು ಸಿದ್ಧತೆ ಬೇಕು. ಈಗ ಅದಕ್ಕೆ ಅಷ್ಟೊಂದು ಸಮಯವಿಲ್ಲ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವವರ ಜೊತೆ ಕೈ ಜೋಡಿಸಲು ಚಿಂತನೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ಅಲೆ ಇದೆ. ನಾವು ಚುನಾವಣೆಗೆ ಇಳಿದರೇ ಮತಗಳು ವಿಭಜನೆಯಾಗುತ್ತವೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ವಿಷಯವನ್ನು ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ. ಈ ಬಾರಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಿದು ಪಕ್ಷ ಸ್ಪರ್ಧಿಸುವುದಿಲ್ಲ ಎಂಬುದನ್ನು ಅವರೇ ಖಚಿತ ಪಡಿಸಿದ್ದಾರೆ.