ನವದೆಹಲಿ: ಇಂಗ್ಲೆಂಡಿನ ಭಾರತದ ಹೈ ಕಮಿಷನರ್ ನವತೇಜ್ ಸರ್ನಾ ಅವರನ್ನು ಗುರುವಾರ ಅಮೆರಿಕಾದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
1980ನೇ ಸಾಲಿನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಸರ್ನಾ, ವಿದೇಶಾಂಗ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಕಳೆದ ಜನವರಿಯಲ್ಲಿ ಲಂಡನ್ ಗೆ ವರ್ಗವಾಗಿ ಹೋಗಿದ್ದರು. ಪ್ರಸ್ತುತ ಅಮೆರಿಕಾದ ಭಾರತೀಯ ರಾಯಭಾರಿಯಾಗಿರುವ ಅರುಣ್ ಸಿಂಗ್ ನಿವೃತ್ತರಾಗಲಿರುವುದರಿಂದ ಅವರ ಸ್ಥಾನಕ್ಕೆ ಸರ್ನಾ ನೇಮಕಗೊಳ್ಳಲಿದ್ದಾರೆ.
ಸರ್ಕಾರ, ಐಎಫ್ಎಸ್ ಅಧಿಕಾರಿ ತರಂಜಿತ್ ಸಿಂಗ್ ಸಂಧು ಅವರನ್ನು ಶ್ರೀಲಂಕಾದ ಭಾರತೀಯ ಹೈ ಕಮಿಷನರ್ ಆಗಿ ನೇಮಕ ಮಾಡಿದೆ. ಅವರು ಯಶ್ ಸಿನ್ಹಾ ಸ್ಥಾನವನ್ನು ತುಂಬಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.