ಹಲ್ಲೆ ನಡೆಸುತ್ತಿರುವ ಅಕಾಲಿ ದಳ ನಾಯಕ 
ದೇಶ

ಅಕಾಲಿ ದಳ ನಾಯಕ, ಪುತ್ರನಿಂದ ಗರ್ಭಿಣಿ ನರ್ಸ್‌ ಮೇಲೆ ಹಲ್ಲೆ, ವಿಡಿಯೋ ವೈರಲ್‌

ಪಂಜಾಬ್ ನ ಆಡಳಿತರೂಢ ಅಕಾಲಿ ದಳಕ್ಕೆ ಮುಜುಗರ ಉಂಟು ಮಾಡುವಂತಹ ಘಟನೆಯೊಂದು ನಡೆದಿದೆ. ಆಸ್ಪತ್ರೆಯೊಂದರಲ್ಲಿ ಸರದಿಯಲ್ಲಿ ಕಾಯುವಂತೆ...

ಮೋಗಾ: ಪಂಜಾಬ್ ನ ಆಡಳಿತರೂಢ ಅಕಾಲಿ ದಳಕ್ಕೆ ಮುಜುಗರ ಉಂಟು ಮಾಡುವಂತಹ ಘಟನೆಯೊಂದು ನಡೆದಿದೆ. ಆಸ್ಪತ್ರೆಯೊಂದರಲ್ಲಿ ಸರದಿಯಲ್ಲಿ ಕಾಯುವಂತೆ ಹೇಳಿದ ಗರ್ಭಿಣಿ ನರ್ಸ್‌ ಗೆ ಅಕಾಲಿ ದಳದ ನಾಯಕ ಹಾಗೂ ಆತನ ಪುತ್ರ ಕಪಾಳಮೋಕ್ಷ ಮಾಡಿ, ಆಕೆಯ ಮೇಲೆ ಹಲ್ಲೆಗೈದ ಅಮಾನುಷ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಅದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.
ಚಂಡೀಗಢದಿಂದ 175 ಕಿ.ಮೀ. ದೂರದ ಮೋಗಾದಲ್ಲಿನ ಆಸ್ಪತ್ರೆಯಲ್ಲಿ ನರ್ಸ್‌ ಮೇಲಿನ ಈ ಅಮಾನುಷ ಹಾಗೂ ನಿರ್ಲಜ್ಜ ಹಲ್ಲೆಯ ಘಟನೆ ನಡೆದಿದೆ. ಪೊಲೀಸರು ಆರೋಪಿಗಳಿಬ್ಬರ ಮೇಲೆ ಅತಿಕ್ರಮಣ, ಕ್ರಿಮಿನಲ್‌ ಬೆದರಿಕೆಯ ಕೇಸನ್ನು ದಾಖಲಿಸಿದ್ದಾರೆ.
ಗುರುವಾರ ಪರಮ್‌ಜಿತ್‌ ಸಿಂಗ್‌ ಮತ್ತು ಆತನ ಪುತ್ರ ಗುರುಜಿತ್‌ ಜತೆಗೂಡಿ ಗುಪ್ತಾ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರನ್ನು ಕರೆದೊಯ್ಯಲು ಅವರು ಬಂದಿದ್ದರು. ಆದರೆ ನರ್ಸ್‌ ಅವರಿಗೆ ಸರದಿಯಲ್ಲಿ ಕಾಯುವಂತೆ ಸೂಚಿಸಿದ್ದಳು. ತಂದೆ ಮತ್ತು ಮಗ ಇದರಿಂದ ಸಿಟ್ಟುಗೊಂಡು ನರ್ಸ್‌ ಮೇಲೆ ಹಲ್ಲೆ ನಡೆಸಿದ್ದರು. ಪರಮ್‌ಜಿತ್‌ ಸಿಂಗ್‌ ಅವರ ಪತ್ನಿ ದಲ್‌ಜಿತ್‌ ಕೌರ್‌ ಗ್ರಾಮ ಮುಖ್ಯಸ್ಥೆ (ಸರಪಂಚ್‌) ಆಗಿದ್ದಾರೆ.
ಪರಮ್‌ಜಿತ್‌ ಸಿಂಗ್‌ ಮತ್ತು ಆತನ ಪುತ್ರ ಗುರುಜಿತ್‌ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!